alex Certify ʼಅಪ್ಪ – ಅಮ್ಮ ಐ ಲವ್‌ ಯೂʼ ಯುದ್ದಕ್ಕೆ ತೆರಳುವ ಮುನ್ನ ಉಕ್ರೇನ್‌ ಸೈನಿಕನ ಭಾವನಾತ್ಮಕ ಸಂದೇಶ; ವಿಡಿಯೋ ನೋಡಿ ಕಣ್ಣೀರಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಪ್ಪ – ಅಮ್ಮ ಐ ಲವ್‌ ಯೂʼ ಯುದ್ದಕ್ಕೆ ತೆರಳುವ ಮುನ್ನ ಉಕ್ರೇನ್‌ ಸೈನಿಕನ ಭಾವನಾತ್ಮಕ ಸಂದೇಶ; ವಿಡಿಯೋ ನೋಡಿ ಕಣ್ಣೀರಾದ ನೆಟ್ಟಿಗರು

ಉಕ್ರೇನ್​ ನಿನ್ನೆ ಬೆಳಗ್ಗೆಯಿಂದ ರಷ್ಯಾದ ಮಿಲಿಟರಿ ಕಾರ್ಯಾಚರಣೆಯನ್ನು ಎದುರಿಸುತ್ತಿದ್ದು, ಉಕ್ರೇನ್​ ನಗರದ ವಿವಿಧ ಭಾಗಗಳಲ್ಲಿ ಸಾಕಷ್ಟು ಸಾವು ನೋವುಗಳನ್ನು ಕಂಡಿದೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಉಕ್ರೇನ್​ ಮೇಲೆ ಯುದ್ಧ ಘೋಷಿಸಿದ ಬಳಿಕ ಇವರೆಗೆ ಕನಿಷ್ಟ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿ ಸಿಕ್ಕಿದೆ.

ರಷ್ಯಾದ ಆಕ್ರಮಣಕ್ಕೆ ಸಿಲುಕಿರುವ ಉಕ್ರೇನ್​ನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುತ್ತಿಲ್ಲ. ರಷ್ಯಾವನ್ನು ಎದುರಿಸಲು ಉಕ್ರೇನ್​ ಸಾಕಷ್ಟು ಹರಸಾಹಸಗಳನ್ನು ಪಡುತ್ತಿರುವ ನಡುವೆಯೇ ಉಕ್ರೇನ್​ ಸೈನಿಕನ ಭಾವನಾತ್ಮಕ ವಿಡಿಯೋವೊಂದು ವೈರಲ್​ ಆಗಿದ್ದು ಮನ ಕಲಕುವಂತಿದೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಸಣ್ಣ ವಿಡಿಯೋದಲ್ಲಿ ಉಕ್ರೇನ್​ ಸೈನಿಕನು ತನ್ನ ತಂದೆ – ತಾಯಿಯ ಬಗ್ಗೆ ಮಾತನಾಡಿದ್ದಾನೆ. ರಷ್ಯಾದ ಆಕ್ರಮಣವನ್ನು ಎದುರಿಸಲು ಹೊರಡುವ ಮುನ್ನ ಸೈನಿಕನು ಮತ್ತೆ ತಾನು ವಾಪಸ್​ ಬರುತ್ತೇನೋ ಅಥವಾ ಇಲ್ಲವೋ ಎಂಬ ಅನುಮಾನದಲ್ಲಿ ಈ ವಿಡಿಯೋ ಮಾಡಿರುವಂತೆ ಕಾಣುತ್ತಿದೆ, ಅಮ್ಮ ಹಾಗೂ ಅಪ್ಪ ನಿಮ್ಮಿಬ್ಬರನ್ನು ನಾನು ಪ್ರೀತಿಸುತ್ತೇನೆ ಎಂದು ಇನ್ನೂ ಹೆಸರಿಸಲಾಗದ ಸೈನಿಕ ವಿಡಿಯೋದಲ್ಲಿ ಹೇಳುತ್ತಿರೋದನ್ನು ಕೇಳಬಹುದಾಗಿದೆ.

— Inayat Malik (@inayatmalik00) February 24, 2022

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...