ವಿವಾಹ ಬಂಧನವೇ ಒಂದು ಅಚ್ಚರಿ. ಯಾವುದೋ ಊರಿನ ವರ, ಮತ್ಯಾವುದೋ ಸ್ಥಳದ ವಧುವಿನ ನಡುವೆ ವಿವಾಹ ನಡೆದುಬಿಡುತ್ತದೆ. ಅನೇಕ ಸಂದರ್ಭಗಳಲ್ಲಿ ಅಂದ- ಚೆಂದ, ಎತ್ತರ ಪರಿಗಣನೆಯೇ ಆಗದು. ಕೆಲವು ಉದಾಹರಣೆಗಳಲ್ಲಿ ಅನುರೂಪ ಜೋಡಿ ಒಂದಾಗಿ ಬಿಡುತ್ತದೆ.
ಇಲ್ಲೊಂದು ಅಪರೂಪದ, ಅನುರೂಪದ ಜೋಡಿಯ ವಿವಾಹ ನಡೆದಿದೆ. ವಿವಾಹದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಬಿಹಾರದ ಭಾಗಲ್ಪುರದ ಈ ಮದುವೆ ನಡೆದಿದ್ದು, ವರ 36 ಇಂಚು ಎತ್ತರವಿದ್ದು, ವಧು 34 ಇಂಚು ಎತ್ತರವಿದ್ದಾರೆ.
BIG NEWS: ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿ ಶೀಘ್ರ
ಈ ಅಸಾಮಾನ್ಯ ಜೋಡಿಯು ವೈವಾಹಿಕ ಜೀವನಕ್ಕೆ ಕಾಲಿಡುವ ಸಂದರ್ಭದಲ್ಲಿ ಸಾಕ್ಷಿಯಾಗಲು ನೂರಾರು ಮಂದಿ ಹಾಜರಿದ್ದರು.
ಈ ವಿಡಿಯೋಗೆ ಒಂದಷ್ಟು ಹಾಸ್ಯ ಪ್ರತಿಕ್ರಿಯೆಗಳೂ ಬಂದಿವೆ. ಅನೇಕರು ಈ ಜೋಡಿ ಕಂಡು ಅಚ್ಚರಿಯನ್ನೂ ಪಟ್ಟಿದ್ದಾರೆ.