alex Certify ʼಅಡುಗೆʼ ರುಚಿ ಹೆಚ್ಚಿಸಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಅಡುಗೆʼ ರುಚಿ ಹೆಚ್ಚಿಸಲು ಈ ಟಿಪ್ಸ್ ಗಳನ್ನು ಫಾಲೋ ಮಾಡಿ

ಅಡುಗೆ ಮಾಡುವಾಗ ಕೆಲವು ವಿಷಯಗಳತ್ತ ಹೆಚ್ಚಿನ ಗಮನ ಹರಿಸಿದರೆ ಕೆಲವು ಖಾದ್ಯ ಇನ್ನಷ್ಟು ರುಚಿಯಾಗುತ್ತದೆ ಹಾಗೂ ಅಡುಗೆ ಕೆಲಸವೂ ಸುಲಭವಾಗುತ್ತದೆ. ಆ ಸಲಹೆಗಳು ಯಾವುದು ಅಂತ ತಿಳಿಯೋಣ.

* ಸಾರಿಗೆ ಉಪ್ಪು ಹೆಚ್ಚಾದರೆ ಕಬ್ಬಿಣದ ಸೌಟನ್ನು ಒಲೆಯ ಮೇಲಿಟ್ಟು ಅದು ಕೆಂಪಗೆ ಕಾದ ಮೇಲೆ ಸಾರಿನಲ್ಲಿ ಅದ್ದಿದರೆ ಉಪ್ಪು ಸರಿಯಾಗುತ್ತದೆ.

* ದ್ರಾಕ್ಷಿ, ಟೊಮೆಟೊ, ಕಿತ್ತಳೆ ಹಣ್ಣುಗಳನ್ನು ಕುದಿಯುವ ನೀರಿನಲ್ಲಿ ಎರಡು ನಿಮಿಷಗಳ ಕಾಲ ಇಟ್ಟು ನಂತರ ತಣ್ಣೀರಿಗೆ ಹಾಕಿದರೆ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು.

* ಕಾಫಿಗೆ ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ ಕುಡಿದರೆ ಕಾಫಿಯ ರುಚಿ ಹೆಚ್ಚುತ್ತದೆ.

* ತೊಗರಿ ಬೇಳೆ ಬೇಯಲು ಇಡುವಾಗ ಅದರ ಜೊತೆ ಒಂದು ಚೂರು ತೆಂಗಿನಕಾಯಿ ಹಾಕಿದರೆ ಬೇಳೆ ಬೇಗ ಮತ್ತು ಚೆನ್ನಾಗಿ ಬೇಯುತ್ತದೆ.

* ಹಾಲು ಕಾಯಿಸುವಾಗ ಆ ಪಾತ್ರೆಯಲ್ಲಿ ಒಂದು ಸ್ಟೀಲ್‌ ಸೌಟು ಹಾಕಿಟ್ಟರೆ ಹಾಲು ಉಕ್ಕಿ ಚೆಲ್ಲುವುದಿಲ್ಲ.

* ಸೊಪ್ಪು ಬೇಯಿಸುವಾಗ ಪಾತ್ರೆ ಮೇಲೆ ಮುಚ್ಚಳ ಇಡಬೇಡಿ. ಇದರಿಂದ ಸೊಪ್ಪಿನ ಹಸಿರು ಬಣ್ಣ ಹಾಗೆಯೇ ಇರುತ್ತದೆ.

* ಕಾಲಿಫ್ಲವರ್‌ಗೆ ಸ್ವಲ್ಪ ವಿನಿಗರ್‌ ಬೆರೆಸಿ ಬೇಯಿಸಿದರೆ ಅದರ ಬಿಳಿ ಬಣ್ಣ ಹಾಗೆಯೇ ಇರುತ್ತದೆ.

* ಮಸಾಲೆ ಅಥವಾ ಕೊಬ್ಬರಿ ರುಬ್ಬುವಾಗ ಸ್ವಲ್ಪ ಉಪ್ಪು ಹಾಕಿದರೆ ಕೊಬ್ಬರಿ ಬೇಗ ನುಣ್ಣಗಾಗುತ್ತದೆ ಮತ್ತು ಮೈ ಮೇಲೆ ಸಿಡಿಯುವುದಿಲ್ಲ.

* ಪಲಾವ್‌ ಮಾಡುವ ಮೊದಲು ಬಾಸುಮತಿ ಅಕ್ಕಿಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಟ್ಟು ನೀರು ಬಸಿದು ಮೂರ್ನಾಲ್ಕು ನಿಮಿಷ ಹಾಗೆಯೇ ಬಿಟ್ಟು ನಂತರ ಪಲಾವ್‌ ಮಾಡಿದರೆ ಅನ್ನ ಮುದ್ದೆಯಾಗದೆ ಉದುರುದುರಾಗಿರುತ್ತದೆ.

* ದೋಸೆ ಅಕ್ಕಿಗೆ ಸ್ವಲ್ಪ ಹೆಸರುಬೇಳೆ ಹಾಕಿ ರುಬ್ಬಿದರೆ ದೋಸೆ ಮೃದುವಾಗುತ್ತದೆ.

* ಬಾಳೆಕಾಯಿಯನ್ನು ಹೆಚ್ಚುವಾಗ ಕೈಗಳಿಗೆ ಮಜ್ಜಿಗೆ ಸವರಿದರೆ ಕೈ ಕಪ್ಪಾಗುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...