HomeKarnatakaBIG NEWS: ಮದ್ಯದ ದರ ಏರಿಕೆ ವಿಚಾರ; ಸ್ಪಷ್ಟನೆ ನೀಡಿದ ಅಬಕಾರಿ ಸಚಿವ

BIG NEWS: ಮದ್ಯದ ದರ ಏರಿಕೆ ವಿಚಾರ; ಸ್ಪಷ್ಟನೆ ನೀಡಿದ ಅಬಕಾರಿ ಸಚಿವ

ಬೆಂಗಳೂರು: ಮದ್ಯದ ದರ ಏರಿಕೆಯಾಗಿದೆ ಎಂಬ ಸುದ್ದಿ ವಿಚರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ರಾಜ್ಯ ಸರ್ಕಾರ ದರ ಏರಿಕೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್,ಬಿ.ತಿಮ್ಮಾಪುರ, ರಾಜ್ಯ ಸರ್ಕಾರ ಯಾವುದೇ ಮದ್ಯದ ದರ ಏರಿಸಿಲ್ಲ. ಮದ್ಯ ಉತ್ಪಾದಕರು ದರ ಹೆಚ್ಚಿಸಿರಬಹುದು. ಆದರೆ ನಾವಂತು ಮಾಡಿಲ್ಲ ಎಂದು ಹೇಳಿದ್ದಾರೆ.

ಅಬಕಾರಿ ಶುಲ್ಕ ಹೆಚ್ಚಳ ಮಾಡುವುದಾದರೆ ಮೊದಲೇ ತಿಳಿಸುತ್ತೇವೆ. ಬಜೆಟ್ ನಲ್ಲಿಯೂ ತೆರಿಗೆ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿಲ್ಲ. ಯಾವುದೆ ಟಾರ್ಗೆಟ್ ನೀಡಿಲ್ಲ. ಆದರೆ ಆದಾಯ ಸಂಗ್ರಹದ ಗುರಿ ಇದೆ ಎನ್ನುವ ಮೂಲಕ ಊಹಾಪೋಹದ ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular