alex Certify ಉಗುರು, ಕಣ್ಣು ಹಳದಿಯಾಗುವುದು ಈ ರೋಗದ ಲಕ್ಷಣ: ಎಚ್ಚರ ತಪ್ಪಿದ್ರೆ ಅಪಾಯ ನಿಶ್ಚಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಗುರು, ಕಣ್ಣು ಹಳದಿಯಾಗುವುದು ಈ ರೋಗದ ಲಕ್ಷಣ: ಎಚ್ಚರ ತಪ್ಪಿದ್ರೆ ಅಪಾಯ ನಿಶ್ಚಿತ

ದೇಹದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾದಾಗ ಕಾಮಾಲೆ ಕಾಣಿಸಿಕೊಳ್ಳುತ್ತದೆ. ಕಾಮಾಲೆ ಹೆಚ್ಚಾಗಿ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಯಕೃತ್ತು ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಬಿಲಿರುಬಿನ್ ಕ್ರಮೇಣ ದೇಹದಾದ್ಯಂತ ಹರಡುತ್ತದೆ.

ಇದರಿಂದಾಗಿ ದೇಹದಲ್ಲಿ ರಕ್ತದ ಕೊರತೆ ಮತ್ತು ಚರ್ಮ, ಉಗುರುಗಳು ಮತ್ತು ಕಣ್ಣುಗಳು ಹಳದಿಯಾಗುತ್ತವೆ. ಕಾಮಾಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಆರಂಭಿಸಿದರೆ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ಆದರೆ ಸ್ವಲ್ಪ ಎಚ್ಚರ ತಪ್ಪಿದರೂ ಈ ಸಮಸ್ಯೆ ಗಂಭೀರವಾಗಬಹುದು. ಹಾಗಾಗಿ ಅದರ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು.

ಕಾಮಾಲೆ ಕಾಡಲು ಅನೇಕ ಕಾರಣವಿದೆ. ಕಲುಷಿತ ಆಹಾರ, ವೈರಲ್ ಸೋಂಕು, ಆಲ್ಕೋಹಾಲ್, ಹೆಪಟೈಟಿಸ್ ಬಿ ಮತ್ತು ಸಿ ವೈರಸ್ ಸೋಂಕು, ಪಿತ್ತರಸ ನಾಳದಲ್ಲಿ ಗಡ್ಡೆಗಳು ಅಥವಾ ಕ್ಯಾನ್ಸರ್, ಸೋಂಕಿತ ರಕ್ತ ಪಡೆಯುವುದ್ರಿಂದಲೂ ಇದು ಕಾಣಿಸಿಕೊಳ್ಳುತ್ತದೆ.

ಬಿಲಿರುಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡುಬರುತ್ತದೆ. ಕಾಲಾನಂತರದಲ್ಲಿ, ಕೆಂಪು ರಕ್ತ ಕಣಗಳಲ್ಲಿ ಸಂಗ್ರಹವಾಗಿ ಸಾಯುತ್ತವೆ, ಯಕೃತ್ತು ಸತ್ತ ಜೀವಕೋಶಗಳನ್ನು ಫಿಲ್ಟರ್ ಮಾಡಲು ಕೆಲಸ ಮಾಡುತ್ತದೆ. ಯಕೃತ್ತು ಸತ್ತ ಜೀವಕೋಶಗಳನ್ನು ಫಿಲ್ಟರ್ ಮಾಡಲು ಸಾಧ್ಯವಾಗದಿದ್ದಾಗ, ರಕ್ತದಲ್ಲಿನ ಬಿಲಿರುಬಿನ್ ಪ್ರಮಾಣವು ಹೆಚ್ಚಾಗುತ್ತದೆ. ಇದು ದೇಹದ ಇತರ ಭಾಗಗಳನ್ನು ತಲುಪುತ್ತದೆ, ದೇಹದ ಎಲ್ಲಾ ಭಾಗಗಳಲ್ಲಿ ಹಳದಿ ಬಣ್ಣವನ್ನು ಉಂಟುಮಾಡುತ್ತದೆ. ಇದನ್ನು ಜಾಂಡೀಸ್ ಎಂದೂ ಕರೆಯುತ್ತಾರೆ. ತಜ್ಞರು ರಕ್ತ ಪರೀಕ್ಷೆಯೊಂದಿಗೆ ರೋಗವನ್ನು ದೃಢೀಕರಿಸುತ್ತಾರೆ.

ಕಾಮಾಲೆ ಲಕ್ಷಣಗಳು : ಕಣ್ಣು, ಉಗುರು, ಚರ್ಮ, ಮೂತ್ರ ಇತ್ಯಾದಿ ಹಳದಿಯಾಗುವುದು. ಹಸಿವಾಗದಿರುವುದು. ವಾಕರಿಕೆ ಬರುವುದು. ತಿನ್ನಲು ಸಮಸ್ಯೆ. ಹೊಟ್ಟೆ ನೋವು. ಸುಸ್ತು. ತೂಕ ಇಳಿಕೆ. ಇದ್ರ ಜೊತೆ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳುವುದುಂಟು.

ಇದ್ರಲ್ಲಿ ಯಾವುದೇ ಲಕ್ಷಣ ಕಂಡು ಬಂದರೂ, ತಕ್ಷಣ ವೈದ್ಯರನ್ನು ಭೇಟಿ ಮಾಡಿ. ಗ್ಯಾಸ್ಟ್ರೋಎಂಟರಾಲಜಿಸ್ಟ್ ಸಂಪರ್ಕಿಸಿ. ಕಲುಷಿತ ಆಹಾರ, ಮದ್ಯ ಇತ್ಯಾದಿಗಳ ಸೇವನೆಯಿಂದ ದೂರವಿರಿ. ವೈದ್ಯರ ಸಲಹೆ ಪಾಲಿಸುವ ಜೊತೆಗೆ, ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ. ಕುದಿಸಿದ ನೀರಿನ ಸೇವನೆ ಮಾಡಬೇಕು. ಜಿಡ್ಡಿನ ಮತ್ತು ಮಸಾಲೆಯುಕ್ತ ಆಹಾರದಿಂದ ದೂರವಿರಬೇಕು. ಶುಚಿತ್ವದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ. ಕಾಮಾಲೆ ಅತ್ಯಂತ ಅಪಾಯಕಾರಿ ಖಾಯಿಲೆಯಾಗಿದೆ. ಸರಿಯಾಗಿ ಚಿಕಿತ್ಸೆ ಪಡೆಯದೆ ಹೋದಲ್ಲಿ ಪ್ರಾಣ ಹೋಗುವ ಅಪಾಯವಿರುತ್ತದೆ. ಹಾಗಾಗಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಜೊತೆ ಪಥ್ಯ ಮಾಡುವ ಅಗತ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...