ಹಿಂದೂ ಧರ್ಮದಲ್ಲಿ ಗುರುವಾರಕ್ಕೆ ವಿಶೇಷ ಮಹತ್ವವಿದೆ. ಈ ದಿನವನ್ನು ವಿಷ್ಣು ಮತ್ತು ಗುರು ಬೃಹಸ್ಪತಿಗೆ ಸಮರ್ಪಿಸಲಾಗಿದೆ. ಗುರುವಾರದಂದು ಪೂಜೆ ಮತ್ತು ಉಪವಾಸವು ಶುಭ ಫಲಿತಾಂಶ ನೀಡುತ್ತದೆ. ವಿಷ್ಣುವಿನ ಕೃಪೆಯಿಂದ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಈ ದಿನ ಉಪವಾಸ ಮತ್ತು ಪೂಜೆಯ ಜೊತೆಗೆ ದಾನಕ್ಕೆ ಮಾನ್ಯತೆ ನೀಡಲಾಗಿದೆ. ಗುರುವಾರದಂದು ಬ್ರಾಹ್ಮಣರು, ಬಡವರು ಮತ್ತು ನಿರ್ಗತಿಕರಿಗೆ ದಾನ ಮಾಡುವುದರಿಂದ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಆದ್ರೆ ಗುರುವಾರದಂದು ಕೆಲ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದಲ್ಲ. ಅದ್ರಿಂದ ದುರಾದೃಷ್ಟ ನಿಮ್ಮನ್ನು ಆವರಿಸಿಕೊಳ್ಳುತ್ತದೆ.
- ಗುರುವಾರದಂದು ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡುವುದರಿಂದ ವಿಷ್ಣು ಪ್ರಸನ್ನನಾಗುತ್ತಾನೆ. ಆದರೆ ಈ ದಿನ ಕಪ್ಪು ವಸ್ತುಗಳನ್ನು ದಾನ ಮಾಡಬಾರದು. ಕಪ್ಪು ಬಣ್ಣದ ವಸ್ತುಗಳನ್ನು ದಾನ ಮಾಡಿದರೆ ಪೂಜೆ ಮಾಡಿದ ಫಲ ಸಿಗುವುದಿಲ್ಲ.
- ಅಗತ್ಯವಿರುವವರಿಗೆ ಸಹಾಯ ಮಾಡುವುದು ಒಳ್ಳೆಯದು. ಆದರೆ ಗುರುವಾರ ಸಾಲ ನೀಡುವುದು ಒಳ್ಳೆಯದಲ್ಲ. ಗುರುವಾರ ನೀಡಿದ ಸಾಲವನ್ನು ಸುಲಭವಾಗಿ ವಸೂಲಿ ಮಾಡಲು ಸಾಧ್ಯವಿಲ್ಲ.
- ಗುರುವಾರದಂದು ಯಾರೂ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದು. ಹೀಗೆ ಮಾಡಿದ್ರೆ ದುರಾದೃಷ್ಟ ಪ್ರಾಪ್ತಿಯಾಗುತ್ತದೆ.
- ವಿಷ್ಣುವಿನ ಪೂಜೆಯಲ್ಲಿ ತುಳಸಿ ಎಲೆಗಳನ್ನು ಬಳಸಲಾಗುತ್ತೆ. ಗುರುವಾರ ಯಾರಿಗೂ ತುಳಸಿ ಎಲೆಗಳನ್ನು ನೀಡಬೇಡಿ. ಇದ್ರಿಂದ ವಿಷ್ಣು ಆಶೀರ್ವಾದವನ್ನು ಕಳೆದುಕೊಳ್ಳಬೇಕಾಗುತ್ತದೆ.
- ಗುರುವಾರ ಹಳದಿ ಬಣ್ಣದ ವಸ್ತುವನ್ನು ದಾನ ಮಾಡಬೇಕು. ಹಾಗೆಯೇ ವಿಷ್ಣು ದೇವಸ್ಥಾನಕ್ಕೆ ಮಾವಿನ ಹಣ್ಣನ್ನು ಅರ್ಪಿಸಬೇಕು. ಗುರುವಾರದಂದು ಕುಂಕುಮವನ್ನು ದಾನ ಮಾಡಿದರೆ ವಿಷ್ಣುವಿನ ಜೊತೆಗೆ ಲಕ್ಷ್ಮಿ ಆಶೀರ್ವಾದ ಸಿಗುತ್ತದೆ.