alex Certify ರೆಫ್ರಿಜರೇಟರ್ ​​ನಲ್ಲಿ ʼಪನ್ನೀರ್ʼ ಫ್ರೆಶ್​ ಆಗಿ ಶೇಖರಿಸಿಡಲು ಇಲ್ಲಿದೆ ಟಿಪ್ಸ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೆಫ್ರಿಜರೇಟರ್ ​​ನಲ್ಲಿ ʼಪನ್ನೀರ್ʼ ಫ್ರೆಶ್​ ಆಗಿ ಶೇಖರಿಸಿಡಲು ಇಲ್ಲಿದೆ ಟಿಪ್ಸ್​

ಪನ್ನೀರು ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದೆ. ಪ್ರೊಟೀನ್​ನ ಮೂಲ ಕೂಡ ಆಗಿರುವ ಪನ್ನೀರಿನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದಾಗಿದೆ.

ಆದರೆ ಪನ್ನೀರನ್ನು ಎಲ್ಲಿ ಸ್ಟೋರ್​ ಮಾಡಿ ಇಡುವುದು ಎಂಬುದೇ ದೊಡ್ಡ ಸಮಸ್ಯೆ. ತುಂಬಾ ದಿನಗಳ ಕಾಲ ಹಾಗೆಯೇ ಇಟ್ಟರೆ ಅದು ಬಬಲ್​ಗಮ್​ನಂತೆ ಆಗುತ್ತದೆ. ಅಗಿಯೋಕೂ ಆಗೋದಿಲ್ಲ. ಪನ್ನೀರು ಬಾಯಲ್ಲಿ ಇಟ್ಟಾಕ್ಷಣ ಕರಗಿದರೆ ಮಾತ್ರ ಮಜಾ ಅಲ್ವೇ..?

ಆದರೆ ನೀವು ರೆಫ್ರಿಜರೇಟರ್​ನಲ್ಲಿ ಪನ್ನೀರನ್ನು ಸುರಕ್ಷಿತವಾಗಿ ಹೇಗೆ ಇಟ್ಕೊಳ್ಳಬೇಕು ಅನ್ನೋದನ್ನ ಇಂದು ನಾವು ಕಲಿಸಿಕೊಡ್ತೀವಿ. ಖ್ಯಾತ ಶೆಫ್​ ಅಜಯ್​ ಚೋಪ್ರಾ ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ನೀವು ಪನ್ನೀರನ್ನು ಫ್ರಿಡ್ಜ್​​ನಲ್ಲಿ ಇಡುವ ಮುನ್ನ ಅದನ್ನು 2 ಬಾರಿ ತೊಳೆಯಿರಿ. ಬಳಿಕ ನೀರನ್ನು ಅದ್ದಿ ತೆಗೆಯಿರಿ. ಇದಾದ ಬಳಿಕ ಉಪ್ಪು ಹಾಗೂ ಅರಿಶಿಣವನ್ನು ಸೇರಿಸಿ. ಇದನ್ನು ನೀವು ಫ್ರಿಡ್ಜ್​ನಲ್ಲಿ ಇಟ್ಟರೆ ನಿಮ್ಮ ಪನ್ನೀರ್​ ಫ್ರೆಶ್​ ಆಗಿಯೇ ಇರಲಿದೆ.

ಶೆಫ್​ ಅಜಯ್​ಚೋಪ್ರಾ ಮಾಸ್ಟರ್​ ಶೆಫ್​ ಇಂಡಿಯಾ ಸೀಸನ್​ 1 ಹಾಗೂ ಸೀಸನ್​ 2 ನಲ್ಲಿ ನಿರ್ಣಾಯಕನ ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್​​ನಲ್ಲಿ ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಬಾಣಸಿಗನ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಜಯ್​​ ಚೋಪ್ರಾ ತಯಾರಿಸಿದ್ದ ಥೆಕುವಾ ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಪತ್ನಿ ಅಕ್ಷತಾ ಮೂರ್ತಿಗೆ ತುಂಬಾನೇ ಇಷ್ಟವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...