ಪನ್ನೀರು ಭಾರತೀಯ ಅಡುಗೆ ಮನೆಗಳಲ್ಲಿ ಬಳಸುವ ಸಾಮಾನ್ಯ ಪದಾರ್ಥಗಳಲ್ಲಿ ಒಂದಾಗಿದೆ. ಪ್ರೊಟೀನ್ನ ಮೂಲ ಕೂಡ ಆಗಿರುವ ಪನ್ನೀರಿನಿಂದ ವಿವಿಧ ಭಕ್ಷ್ಯಗಳನ್ನು ತಯಾರಿಸಬಹುದಾಗಿದೆ.
ಆದರೆ ಪನ್ನೀರನ್ನು ಎಲ್ಲಿ ಸ್ಟೋರ್ ಮಾಡಿ ಇಡುವುದು ಎಂಬುದೇ ದೊಡ್ಡ ಸಮಸ್ಯೆ. ತುಂಬಾ ದಿನಗಳ ಕಾಲ ಹಾಗೆಯೇ ಇಟ್ಟರೆ ಅದು ಬಬಲ್ಗಮ್ನಂತೆ ಆಗುತ್ತದೆ. ಅಗಿಯೋಕೂ ಆಗೋದಿಲ್ಲ. ಪನ್ನೀರು ಬಾಯಲ್ಲಿ ಇಟ್ಟಾಕ್ಷಣ ಕರಗಿದರೆ ಮಾತ್ರ ಮಜಾ ಅಲ್ವೇ..?
ಆದರೆ ನೀವು ರೆಫ್ರಿಜರೇಟರ್ನಲ್ಲಿ ಪನ್ನೀರನ್ನು ಸುರಕ್ಷಿತವಾಗಿ ಹೇಗೆ ಇಟ್ಕೊಳ್ಳಬೇಕು ಅನ್ನೋದನ್ನ ಇಂದು ನಾವು ಕಲಿಸಿಕೊಡ್ತೀವಿ. ಖ್ಯಾತ ಶೆಫ್ ಅಜಯ್ ಚೋಪ್ರಾ ಇನ್ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನೀವು ಪನ್ನೀರನ್ನು ಫ್ರಿಡ್ಜ್ನಲ್ಲಿ ಇಡುವ ಮುನ್ನ ಅದನ್ನು 2 ಬಾರಿ ತೊಳೆಯಿರಿ. ಬಳಿಕ ನೀರನ್ನು ಅದ್ದಿ ತೆಗೆಯಿರಿ. ಇದಾದ ಬಳಿಕ ಉಪ್ಪು ಹಾಗೂ ಅರಿಶಿಣವನ್ನು ಸೇರಿಸಿ. ಇದನ್ನು ನೀವು ಫ್ರಿಡ್ಜ್ನಲ್ಲಿ ಇಟ್ಟರೆ ನಿಮ್ಮ ಪನ್ನೀರ್ ಫ್ರೆಶ್ ಆಗಿಯೇ ಇರಲಿದೆ.
ಶೆಫ್ ಅಜಯ್ಚೋಪ್ರಾ ಮಾಸ್ಟರ್ ಶೆಫ್ ಇಂಡಿಯಾ ಸೀಸನ್ 1 ಹಾಗೂ ಸೀಸನ್ 2 ನಲ್ಲಿ ನಿರ್ಣಾಯಕನ ಕೆಲಸ ಮಾಡಿದ್ದಾರೆ. ಸೆಪ್ಟೆಂಬರ್ನಲ್ಲಿ ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಬಾಣಸಿಗನ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅಜಯ್ ಚೋಪ್ರಾ ತಯಾರಿಸಿದ್ದ ಥೆಕುವಾ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿಗೆ ತುಂಬಾನೇ ಇಷ್ಟವಾಗಿತ್ತು.