alex Certify ಮಾಸ್ಕ್​ ಮರುಬಳಕೆ ಮಾಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಮರುಬಳಕೆ ಮಾಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಕೊರೊನಾ ವೈರಸ್​​​​ ವಿಶ್ವಕ್ಕೆ ಬಂದು ಅಪ್ಪಳಿಸಿದ ಮೇಲೆ ಮಾಸ್ಕ್​ ಬಳಕೆ ಕಡ್ಡಾಯವಾಗಿ ಪರಿಣಮಿಸಿದೆ. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಮಾಸ್ಕ್​ ಧರಿಸದವರ ವಿರುದ್ಧ ದಂಡವನ್ನ ವಿಧಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಈ ಮಾಸ್ಕ್​ ಬಗ್ಗೆ ನಡೆಸಲಾದ ಸಂಶೋಧನೆಯೊಂದರಲ್ಲಿ ಮಾಸ್ಕ್​ ಧರಿಸದೇ ಇರೋದಕ್ಕಿಂತಲೂ ಬಳಕೆ ಮಾಡಿದ ಮಾಸ್ಕ್​ ಧರಿಸೋದ್ರಿಂದ ವೈರಸ್​ ಹರಡುವಿಕೆ ಅಪಾಯ ಹೆಚ್ಚು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಆರೋಗ್ಯ ಕಾರ್ಯಕರ್ತರು ಬಳಕೆ ಮಾಡುವ ಸರ್ಜಿಕಲ್​ ಮಾಸ್ಕ್​​​ಗಳು ಮೊದಲ ಬಳಕೆಯಲ್ಲಿ ವೈರಸ್​ಗಳ ಎಂಟ್ರಿಯನ್ನ ತಡೆಯುವಲ್ಲಿ ಗಮನಾರ್ಹ ಪಾತ್ರವನ್ನ ವಹಿಸುತ್ತವೆ. ಮೂರು ಪದರಗಳನ್ನ ಹೊಂದಿರುವ ಈ ಮಾಸ್ಕ್​​ಗಳು ಸೋಂಕನ್ನ ಹರಡಲು ಕಾರಣವಾಗುವ ವೈರಸ್​​ಗಳಲ್ಲಿ ಸುಮಾರು ಮುಕ್ಕಾಲು ಪ್ರಮಾಣದಲ್ಲಿ ವೈರಸ್​​ಗಳನ್ನ ತಡೆಯುವಲ್ಲಿ ಶಕ್ತವಾಗಿವೆ.

ಆದರೆ ಇದೇ ಮಾಸ್ಕ್​​ಗಳ ಮರುಬಳಕೆ ಮಾಡಿದರೆ ಕೇವಲ ಕಾಲು ಭಾಗವಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನ ಹೊಂದಿರುತ್ತವೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...