ಕೊರೊನಾ ವೈರಸ್ ವಿಶ್ವಕ್ಕೆ ಬಂದು ಅಪ್ಪಳಿಸಿದ ಮೇಲೆ ಮಾಸ್ಕ್ ಬಳಕೆ ಕಡ್ಡಾಯವಾಗಿ ಪರಿಣಮಿಸಿದೆ. ವಿಶ್ವದ ಬಹುತೇಕ ಎಲ್ಲ ರಾಷ್ಟ್ರಗಳು ಮಾಸ್ಕ್ ಧರಿಸದವರ ವಿರುದ್ಧ ದಂಡವನ್ನ ವಿಧಿಸುವ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಈ ಮಾಸ್ಕ್ ಬಗ್ಗೆ ನಡೆಸಲಾದ ಸಂಶೋಧನೆಯೊಂದರಲ್ಲಿ ಮಾಸ್ಕ್ ಧರಿಸದೇ ಇರೋದಕ್ಕಿಂತಲೂ ಬಳಕೆ ಮಾಡಿದ ಮಾಸ್ಕ್ ಧರಿಸೋದ್ರಿಂದ ವೈರಸ್ ಹರಡುವಿಕೆ ಅಪಾಯ ಹೆಚ್ಚು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಆರೋಗ್ಯ ಕಾರ್ಯಕರ್ತರು ಬಳಕೆ ಮಾಡುವ ಸರ್ಜಿಕಲ್ ಮಾಸ್ಕ್ಗಳು ಮೊದಲ ಬಳಕೆಯಲ್ಲಿ ವೈರಸ್ಗಳ ಎಂಟ್ರಿಯನ್ನ ತಡೆಯುವಲ್ಲಿ ಗಮನಾರ್ಹ ಪಾತ್ರವನ್ನ ವಹಿಸುತ್ತವೆ. ಮೂರು ಪದರಗಳನ್ನ ಹೊಂದಿರುವ ಈ ಮಾಸ್ಕ್ಗಳು ಸೋಂಕನ್ನ ಹರಡಲು ಕಾರಣವಾಗುವ ವೈರಸ್ಗಳಲ್ಲಿ ಸುಮಾರು ಮುಕ್ಕಾಲು ಪ್ರಮಾಣದಲ್ಲಿ ವೈರಸ್ಗಳನ್ನ ತಡೆಯುವಲ್ಲಿ ಶಕ್ತವಾಗಿವೆ.
ಆದರೆ ಇದೇ ಮಾಸ್ಕ್ಗಳ ಮರುಬಳಕೆ ಮಾಡಿದರೆ ಕೇವಲ ಕಾಲು ಭಾಗವಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನ ಹೊಂದಿರುತ್ತವೆಯಂತೆ.