alex Certify ಸಂಗಾತಿ ಹುಡುಕಿಕೊಳ್ಳಲು ನೆರವಾಗುತ್ತೆ ಈ APP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗಾತಿ ಹುಡುಕಿಕೊಳ್ಳಲು ನೆರವಾಗುತ್ತೆ ಈ APP

ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ಪ್ರೇಮಿಗಳು ಒಂದು ತಿಂಗಳಿನಿಂದಲೇ ಇದಕ್ಕೆ ತಯಾರಿ ಶುರು ಮಾಡಿದ್ದಾರೆ. ಇನ್ನೂ ಪ್ರೇಮಿ ಸಿಕ್ಕಿಲ್ಲ, ಒಂಟಿಯಾಗಿ ಪ್ರೇಮಿಗಳ ದಿನ ಆಚರಿಸಬೇಕೆಂದು ಬೇಸರಪಟ್ಟುಕೊಳ್ಳುತ್ತಿದ್ದರೆ ಚಿಂತೆ ಬಿಡಿ. ಕೆಲ ಅಪ್ಲಿಕೇಷನ್ ಮೂಲಕ ಪ್ರೇಮಿಗಳನ್ನು ಹುಡುಕಿಕೊಂಡು ನೀವು ಪ್ರೇಮಿಗಳ ದಿನವನ್ನು ಆಚರಿಸಬಹುದು.

ಭಾರತದಲ್ಲಿ ಓಕೆ ಕ್ಯುಪಿಡ್ ಅಪ್ಲಿಕೇಷನ್ ಹೆಚ್ಚು ಪ್ರಸಿದ್ಧಿಯಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇದು ಲಭ್ಯವಿದೆ. ಇದ್ರಲ್ಲಿ ಸಂಗಾತಿ ಹುಡುಕಿಕೊಂಡು ಪ್ರೇಮಿಗಳ ದಿನವನ್ನು ನೀವು ಆಚರಿಸಬಹುದು.

ಸಂಗಾತಿ ಹುಡುಕಲು ನೀವು ಹ್ಯಾಪ್ನ್ ಅಪ್ಲಿಕೇಷನ್ ಸಹಾಯ ಕೂಡ ಪಡೆಯಬಹುದು. ಈ ಅಪ್ಲಿಕೇಷನ್ ನಲ್ಲಿ ಸುಮಾರು 1 ಕೋಟಿ ಜನರಿದ್ದಾರೆ. ನಿಮ್ಮ ಆಸಕ್ತಿ, ಹವ್ಯಾಸದ ಆಧಾರದ ಮೇಲೆ ಸಂಗಾತಿ ಹುಡುಕಬಹುದು.

ವಿಶ್ವದಾದ್ಯಂತ ಹೆಚ್ಚು ಪ್ರಸಿದ್ಧಿಯಲ್ಲಿರುವ ಬಂಬಲ್ ಈಗ ಭಾರತಕ್ಕೂ ಕಾಲಿಟ್ಟಿದೆ. ಈ ಅಪ್ಲಿಕೇಷನ್ ಯುವಕನ್ನು ಹೆಚ್ಚು ಆಕರ್ಷಿಸಿದೆ. ಸಂಗಾತಿ ಹುಡುಕಿಕೊಳ್ಳಲು ಇದು ನಿಮಗೆ ನೆರವಾಗುತ್ತದೆ.

ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಟಿಂಡರ್ ಹೆಚ್ಚು ಪ್ರಸಿದ್ಧಿಯಲ್ಲಿದೆ. ಕೆಲ ವರ್ಷಗಳಿಂದ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಟಿಂಡರ್ ಮೊದಲ ಸ್ಥಾನದಲ್ಲಿದೆ. ಅಪ್ಲಿಕೇಷನ್ ಗೆ ನೀವು ಹಣ ಪಾವತಿ ಮಾಡಿದ್ರೆ ನಿಮಗೆ ಸಾಕಷ್ಟು ಆಯ್ಕೆಗಳು ಸಿಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...