alex Certify ನಿಮ್ಮ ತಲೆ ಕೆಡಿಸುತ್ತೆ ದೃಷ್ಟಿಭ್ರಮೆಯ ಈ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ತಲೆ ಕೆಡಿಸುತ್ತೆ ದೃಷ್ಟಿಭ್ರಮೆಯ ಈ ವಿಡಿಯೋ….!

ದೃಷ್ಟಿಭ್ರಮೆಯ ವಿಡಿಯೋಗಳೇ ಹಾಗೆ ಅವು ನಿಮ್ಮ ಮೆದುಳಿಗೆ ಕೈ ಹಾಕದೇ ಇರದು. ಮನಶಾಸ್ತ್ರಜ್ಞೆಯೊಬ್ಬರು ಇಂತಹದ್ದೇ ಒಂದು ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.

ಹ್ಯಾಂಪ್​​ಸ್ಪೈರ್​ನ ಡಾ. ಜ್ಯೂಲಿ ಸ್ಮಿತ್​​ ಈ ದೃಷ್ಟಿಭ್ರಮೆಯ ವಿಡಿಯೋವನ್ನ ಶೇರ್​ ಮಾಡಿದ್ದಾರೆ. ವಿಡಿಯೋದಲ್ಲಿ ಸ್ಮಿತ್​ ತಲೆಯ ಮೇಲೆ ಗುಣಾಕಾರ ಆಕಾರದ ಚಿಹ್ನೆಯನ್ನ ಅಂಟಿಸಿಕೊಂಡಿದ್ದು ಗಾರ್ಡನ್​ ಒಂದರಲ್ಲಿ ಕೂತಿದ್ದಾರೆ.

ಈ ಸಂಪೂರ್ಣ ದೃಶ್ಯವನ್ನ ಬ್ಲಾಕ್​ & ವೈಟ್​ನಲ್ಲಿ ಚಿತ್ರೀಕರಿಸಲಾಗಿದೆ.
ವಿಡಿಯೋದಲ್ಲಿ ಆಕೆ ತನ್ನ ಹಣೆಯ ಮೇಲಿರುವ ಚಿಹ್ನೆಯನ್ನ ನೋಡುವಂತೆ ಹೇಳುತ್ತಾರೆ. ಇದನ್ನ ನೀವು ಏಕಾಗ್ರತೆಯಿಂದ ನೋಡುತ್ತಲೇ ಹೋದರೆ ಬ್ಲಾಕ್​ & ವೈಟ್​ ದೃಶ್ಯದಲ್ಲೂ ನಿಮಗೆ ಬಣ್ಣಗಳು ಕಂಡಂತೆ ಭಾಸವಾಗಲಿದೆ.

ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು 4.14 ಲಕ್ಷ ವೀವ್ಸ್ ಸಂಪಾದಿಸಿದೆ. ಅಂದಹಾಗೆ ಈ ವಿಡಿಯೋ ನೋಡಿದ ಬಳಿಕ ನಿಮ್ಮ ಕಣ್ಣಿಗೆ ಯಾವ್ಯಾವ ಬಣ್ಣ ಕಂಡವು ಎಂಬುದನ್ನ ಹೇಳಬಲ್ಲೀರಾ..?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...