ಜಗತ್ತಿನಲ್ಲಿ ಕೊರೊನಾ ವೈರಸ್ ಕಾಟ ಕೊನೆಗೊಂಡು ಜನತೆ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನ ಬಳಕೆ ಮಾಡದೇ ಇರುವಂತಹ ದಿನಗಳು ಯಾವಾಗ ಬರುತ್ತೋ ಅಂತಾ ಎಲ್ಲರೂ ಬೆರಗು ಕಣ್ಣಿನಿಂದ ಕಾಯುತ್ತಿದ್ದಾರೆ. ಆದರೆ ಈ ಮಾತು ಸದ್ಯಕ್ಕಂತೂ ನಿಜ ಆಗೋ ರೀತಿ ಕಾಣ್ತಿಲ್ಲ. ಹೀಗಾಗಿ ಮಾಸ್ಕ್ ಹಾಗೂ ಸ್ಯಾನಿಟೈಸರ್ಗಳನ್ನ ಬಳಕೆ ಮಾಡಲೇಬೇಕಾಗಿದೆ. ಈಗಂತು ಮರು ಬಳಕೆ ಮಾಡಲು ಸಾಧ್ಯವಾಗುವಂತಹ ಮಾಸ್ಕ್ಗಳನ್ನೇ ಹೆಚ್ಚಾಗಿ ಬಳಕೆ ಮಾಡಲಾಗ್ತಿದೆ. ಮಾಸ್ಕ್ಗಳನ್ನ ಎಷ್ಟು ದಿನಗಳಿಗೊಮ್ಮೆ ಸ್ವಚ್ಛ ಮಾಡಬೇಕು ಅನ್ನೋದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಕಾಯಿಲೆ ನಿಯಂತ್ರಣ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ, ನೀವು ಯಾವ ಮಾಸ್ಕ್ ಬಳಕೆ ಮಾಡ್ತೀರಿ ಹಾಗೂ ಎಷ್ಟು ಗಂಟೆಗಳ ಕಾಲ ಬಳಕೆ ಮಾಡ್ತೀರಿ ಅನ್ನೋದರ ಮೇಲೆ ಅದನ್ನ ಹೇಗೆ ಸ್ವಚ್ಛ ಮಾಡಬೇಕು ಅನ್ನೋದನ್ನ ನಿರ್ಧರಿಸಲಾಗುತ್ತೆ.
ಮಾಸ್ಕ್ಗಳು ಮೂಗು ಹಾಗೂ ಬಾಯಿಗೆ ತುಂಬಾ ಹತ್ತಿರದಲ್ಲಿ ಇರುವ ಕಾರಣ ಇದರಲ್ಲಿ ಯಾವುದೇ ಕ್ರಿಮಿಗಳು ಕೂರದಂತೆ ಲಕ್ಷ್ಯ ವಹಿಸಬೇಕು. ಯಾವುದೇ ವೈರಸ್ಗಳು ಈ ಮಾಸ್ಕ್ಗಳ ಮೇಲೆ ಕೂತರೂ ಸಹ ಅಪಾಯ ಇದೆ.
ನೆಚ್ಚಿನ ಶ್ವಾನಕ್ಕೆ ಗಿಫ್ಟ್ ನೀಡಿದ ವಿಶ್ವದ ಅತಿ ಸಿರಿವಂತ…..! ಮರುಕ್ಷಣವೇ ನಡೆದಿದೆ ಈ ಘಟನೆ
ವೈದ್ಯೆ ಬೆಲಾ ಶರ್ಮಾ ನೀಡಿರುವ ಮಾಹಿತಿ ಪ್ರಕಾರ, ಬಟ್ಟೆಯಿಂದ ತಯಾರಾದ ಮಾಸ್ಕ್ಗಳನ್ನ ಪ್ರತಿಬಾರಿ ಬಳಸಿದ ಬಳಿಕವೂ ವಾಶ್ ಮಾಡಬೇಕು. ಹೀಗಾಗಿ ಎರಡು ಮಾಸ್ಕ್ಗಳನ್ನ ಇಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ನೀವೆನಾದರೂ ಆರೋಗ್ಯ ಸಿಬ್ಬಂದಿಯಾಗಿದ್ದರೆ ಎನ್ 95 ಮಾಸ್ಕ್ಗಳನ್ನೇ ಬಳಕೆ ಮಾಡಬೇಕಾಗುತ್ತೆ. ಈ ಮಾಸ್ಕ್ಗಳನ್ನ ನೀವು 5 ದಿನಗಳ ಕಾಲ ಬಳಕೆ ಮಾಡಬಹುದು. ಆಮೇಲೆ ಬೇರೆ ಮಾಸ್ಕ್ ಧರಿಸಿ ಎಂದು ಹೇಳಿದ್ದಾರೆ.
ದಿನನಿತ್ಯದ ಬಳಕೆಗೆ ಮಾಸ್ಕ್ ಹಾಕುವವರು ಪ್ರತಿವಾರ ಹೊಸ ಮಾಸ್ಕ್ ಕೊಳ್ಳಬೇಕು ಎಂದೇನಿಲ್ಲ. ಮಾಸ್ಕ್ಗಳನ್ನ ಪ್ರತಿನಿತ್ಯ ಸ್ವಚ್ಛ ಮಾಡೋದ್ರ ಮೂಲಕ ಮರು ಬಳಕೆ ಮಾಡಬಹುದಾಗಿದೆ. ಸಾಬೂನು ದ್ರವದ ಸಹಾಯದಿಂದ ಬೆಚ್ಚನೆಯ ನೀರಿನಲ್ಲಿ ಮಾಸ್ಕ್ಗಳನ್ನ ತೊಳೆದು, ಬಿಸಿಲಿನಲ್ಲಿ ಒಣಗಿಸಿ ಮರು ಬಳಕೆ ಮಾಡಬಹುದು.