ಹೋಳಿ ಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ. ಬಣ್ಣಗಳ ಹಬ್ಬವನ್ನ ಆಚರಿಸೋದು ಎಷ್ಟು ಮಜಾನೋ.. ಮುಖ ಹಾಗೂ ಮೈಗಂಟಿದ ಬಣ್ಣವನ್ನ ತೊಳೆದುಕೊಳ್ಳೋದು ಒಂದು ಸಜೆನೇ ಸರಿ. ಕೆಮಿಕಲ್ನಿಂದ ಮಾಡಿದ ಬಣ್ಣಗಳು ಮುಖದ ಚರ್ಮಕ್ಕೆ ಹಾನಿ ಉಂಟು ಮಾಡೋದ್ರಿಂದ ಆದಷ್ಟು ಬೇಗ ಈ ಬಣ್ಣಗಳನ್ನ ತೊಳೆದುಕೊಳ್ಳೋದು ಒಳ್ಳೆದು. ಹಾಗಾದ್ರೆ ಮುಖ ಹಾಗೂ ಚರ್ಮಕ್ಕೆ ಅಂಟಿದ ಬಣ್ಣವನ್ನ ಹೇಗೆ ಸಂಪೂರ್ಣವಾಗಿ ಸ್ವಚ್ಛ ಮಾಡಿಕೊಳ್ಳಬೋದು ಅನ್ನೋದಕ್ಕೆ ಇಲ್ಲಿದೆ ಟಿಪ್ಸ್ :
ಕೊಬ್ಬರಿ ಎಣ್ಣೆ : ಚರ್ಮದಿಂದ ಬಣ್ಣವನ್ನ ತೆಗೆದುಹಾಕಲು ಕೊಬ್ಬರಿ ಎಣ್ಣೆ ಬೆಸ್ಟ್ ಆಯ್ಕೆ. ಹೋಳಿ ಹಬ್ಬವನ್ನ ಆಚರಿಸೋಕೂ ಮುನ್ನ ಮುಖ ಹಾಗೂ ಮೈ ಕೈಗೆ ಕೊಬ್ಬರಿ ಎಣ್ಣೆಯನ್ನ ಸವರಿಕೊಂಡು ಹೋಗಿ. ಕೊಬ್ಬರಿ ಎಣ್ಣೆ ಬದಲು ಮಾಯಿಸ್ಚರೈಸರ್ನ್ನೂ ಬಳಕೆ ಮಾಡಬಹುದು.
ಗಾಢ ಬಣ್ಣದ ನೇಲ್ ಪೇಂಟ್ : ಉಗುರುಗಳಿಗೆ ಬಣ್ಣ ತಾಕಿದ್ರೂ ಸಹ ಅವು ಅಷ್ಟೊಂದು ಬೇಗನೇ ಹೋಗೋದಿಲ್ಲ. ಹೀಗಾಗಿ ಹೋಳಿ ಆಚರಣೆಗೆ ಹೋಗೋಕೂ ಮುನ್ನ ಉಗುರಿಗೆ ಗಾಢ ಬಣ್ಣದ ನೇಲ್ ಪೇಂಟ್ಗಳನ್ನ ಬಳಸಿ. ಹೋಳಿ ಬಣ್ಣ ಆಡಿದ ಬಳಿಕ ನೇಲ್ಪೇಂಟ್ಗಳನ್ನ ಅಳಿಸಿ ಹಾಕಿದ್ರೆ ಅದರ ಜೊತೆಗೆ ಉಗುರಿಗಂಟಿದ ಬಣ್ಣವೂ ಹೋಗುತ್ತೆ.
ಹಬ್ಬಕ್ಕೆ ಮಾಡಿ ಸವಿಯಿರಿ ಖರ್ಜೂರದ ಹೋಳಿಗೆ
ಫೇಸ್ ಪ್ಯಾಕ್ : ಮೂರು ಚಮಚ ಒಟ್ಮೀಲ್, 2 ಚಮಚ ನಿಂಬೆ ರಸ ಹಾಗೂ ಜೇನುತುಪ್ಪವನ್ನ ನೀರಿನಲ್ಲಿ ಮಿಶ್ರಣ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಇದನ್ನ ಮುಖಕ್ಕೆ ಮಸಾಜ್ ಮಾಡಿಕೊಂಡು 40 ನಿಮಿಷಗಳ ಕಾಲ ಹಾಗೇ ಇಡಿ. ಬಳಿಕ ಮುಖವನ್ನ ತಣ್ಣನೆಯ ನೀರಿನಲ್ಲಿ ತೊಳೆದುಕೊಳ್ಳಿ.
ನಿಂಬು : ನಿಂಬೆ ಹಣ್ಣನ್ನ ನೇರವಾಗಿ ಮುಖಕ್ಕೆ ಹಚ್ಚಿಕೊಂಡರೆ ಕೆಲವರಿಗೆ ಅಲರ್ಜಿ ಉಂಟಾಗುತ್ತೆ. ಆದರೆ ನಿಂಬೆ ರಸಕ್ಕೆ ಬಣ್ಣವನ್ನ ಅಳಿಸುವ ಶಕ್ತಿ ಇರುವ ಕಾರಣ ಫೇಸ್ ಪ್ಯಾಕ್ ಒಣಗುತ್ತಿದ್ದಂತೆಯೇ ಮುಖದ ಮೇಲೆ ನಿಂಬೆ ಹಣ್ಣಿನ ಹೋಳನ್ನ ಮುಖಕ್ಕೆ ಸವರಿ. ಬಳಿಕ ತಣ್ಣನೆಯ ನೀರಿನಲ್ಲಿ ಮುಖವನ್ನ ತೊಳೆಯಿರಿ.