ಮಕ್ಕಳಿಗೆ ಪರೀಕ್ಷೆ ಹತ್ತಿರವಾಗ್ತಾ ಇದೆ. ಪಾಲಕರ ಆತಂಕ ಜಾಸ್ತಿಯಾಗಿದೆ. ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕೆಂಬ ಆಸೆ ಇದ್ದರೆ ಸ್ವಲ್ಪ ಬುದ್ಧಿ ಉಪಯೋಗಿಸಿ. ಮಕ್ಕಳ ದೈನಂದಿನ ಆಹಾರದಲ್ಲಿ ಬದಲಾವಣೆ ತನ್ನಿ.
ಸಾಮಾನ್ಯವಾಗಿ ಮಕ್ಕಳ ಉಪಹಾರ ಹಾಗೂ ಊಟಕ್ಕೆ 10 ಗಂಟೆಗಳ ಗ್ಯಾಪ್ ಇರುತ್ತೆ. ಹಾಗಾಗಿ ಉಪಹಾರಕ್ಕೆ ಗಟ್ಟಿ ಆಹಾರವನ್ನು ನೀಡಿ. ಓಟ್ಸ್, ಉಪ್ಪಿಟ್ಟು ಅಥವಾ ಇಡ್ಲಿಯಂತಹ ಆಹಾರ ನೀಡಿ.
ಗಟ್ಟಿ ಆಹಾರ ನೀಡಿ ಎಂದ್ರೆ ನಂತ್ರ ಏನೂ ಕೊಡಬೇಡಿ ಎಂದರ್ಥವಲ್ಲ. ಮಧ್ಯ ಮಧ್ಯ ಆರೋಗ್ಯಕರ, ಪೌಷ್ಟಿಕ ಆಹಾರವನ್ನು ನೀಡ್ತಾ ಇರಿ. ಇದರಿಂದ ಅವರಿಗೆ ಅಗತ್ಯವಿರುವ ನ್ಯೂಟ್ರಿಷನ್ ಸಿಗುವುದರಿಂದ ಅವರು ಚಟುವಟಿಕೆಯಿಂದಿದ್ದು, ಓದಿನ ಬಗ್ಗೆ ಹೆಚ್ಚಿನ ಗಮನ ನೀಡ್ತಾರೆ. ತಾಜಾ ಹಣ್ಣು, ಹಣ್ಣಿನ ಜ್ಯೂಸ್, ಒಣ ಹಣ್ಣು, ಸೂಪ್, ಸಲಾಡ್ ನೀಡುವುದು ಉತ್ತಮ.
ಮೈ ಜುಮ್ಮೆನ್ನುವಂತೆ ಮಾಡುತ್ತೆ ಜ್ವಾಲಾಮುಖಿಯ ಈ ದೃಶ್ಯ…!
ಪರೀಕ್ಷೆ ವೇಳೆ ಮಕ್ಕಳು ಮರೆಯೋದು ಜಾಸ್ತಿ. ಹಾಗಾಗಿ ಮಕ್ಕಳ ನೆನಪಿನ ಶಕ್ತಿ ಹೆಚ್ಚಾಗುವಂತಹ ಆಹಾರವನ್ನು ನೀಡಿ. ಮೀನು, ಕುಂಬಳಕಾಯಿ ಬೀಜ, ಎಳ್ಳು, ಸೊಯಾಬಿನ್ ಎಣ್ಣೆ ಒಳ್ಳೆಯದು.
ಪರೀಕ್ಷೆ ಒತ್ತಡದಿಂದಾಗಿ ಮಕ್ಕಳು ಅನಾರೋಗ್ಯಕ್ಕೊಳಗಾಗ್ತಾರೆ. ಇದ್ರಿಂದ ಮಕ್ಕಳ ಓದು ಕಷ್ಟವಾಗುತ್ತದೆ. ಹಾಗಾಗಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಮಕ್ಕಳಿಗೆ ನೀಡಬೇಕು. ಮೊಟ್ಟೆ, ಮೀನು, ಕ್ಯಾರೆಟ್, ಕುಂಬಳಕಾಯಿ, ಹಸಿರು ಎಲೆಯ ತರಕಾರಿ ಹಾಗೂ ತಾಜಾ ಹಣ್ಣುಗಳನ್ನು ನೀಡಿ.
ಚಳಿಗಾಲದಲ್ಲಿ ಬಾಯಾರಿಕೆ ಕಡಿಮೆ. ಮಕ್ಕಳು ನೀರನ್ನು ಹೆಚ್ಚಾಗಿ ಕುಡಿಯುವುದಿಲ್ಲ. ಇದ್ರಿಂದ ನಿರ್ಜಲೀಕರಣ ಸಮಸ್ಯೆಯಾಗುತ್ತದೆ. ಓದಲು ಮಕ್ಕಳಿಗೆ ಮನಸ್ಸಿರುವುದಿಲ್ಲ. ನೀರು ಕುಡಿಯಲು ಮಕ್ಕಳು ಇಷ್ಟಪಡದಿದ್ದಲ್ಲಿ ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ಪಾನಕ, ಮಜ್ಜಿಗೆಯನ್ನು ಕುಡಿಯಲು ಕೊಡಿ. ಆದ್ರೆ ಪರೀಕ್ಷೆ ಸಮಯದಲ್ಲಿ ಟೀ, ಕಾಫಿ, ಎನರ್ಜಿ ಡ್ರಿಂಕ್ ನೀಡಬೇಡಿ.