ತನ್ನ ಹುಟ್ಟಿಗೆ ಎದುರಾದ ಎಲ್ಲ ಅಡೆತಡೆಗಳನ್ನು ಮೆಟ್ಟಿನಿಂತು ಭೂಮಿಗೆ ಬಂದ ಕರುವೊಂದು ಆರು ಕಾಲುಗಳೊಂದಿಗೆ ಜನಿಸಿದೆ. ಈ ಗಂಡುಕರುವಿನ ತೋಳುಗಳಿಗೆ ಅಂಟಿಕೊಂಡಂತೆ 5-6ನೇ ಕಾಲುಗಳು ನೇತಾಡುತ್ತಿವೆ.
ಉತ್ತರ ಐರ್ಲೆಂಡ್ನ ನಟ್ ಹೌಸ್ ರೆಸ್ಕ್ಯೂ & ರೀ-ಹೋಮಿಂಗ್ಗೆ ಈ ಕರುವನ್ನು ಸೇರಿಸಲಾಗಿದ್ದು, ಸಹಜವಾದ ವಾತಾವರಣದಲ್ಲಿ ತನ್ನಷ್ಟಕ್ಕೆ ತಾನು ಬದುಕಲು ಅವಕಾಶ ಮಾಡಿಕೊಡಲಾಗಿದೆ.
ಬೆರಗಾಗಿಸುತ್ತೆ 80 ರ ಹರೆಯದಲ್ಲೂ ಈ ʼವೃದ್ಧೆʼ ಮಾಡಿದ ಸಾಧನೆ
ಈ ಎರಡು ಹೆಚ್ಚುವರಿ ಕಾಲುಗಳಲ್ಲಿ ಒಂದು ಬೆನ್ನಿಗೆ ಅಂಟಿಕೊಂಡ ಕಾರಣ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಫೇಸ್ಬುಕ್ನಲ್ಲಿ ಪ್ರಾಣಿದಯಾ ಸಂಸ್ಥೆ ತಿಳಿಸಿದೆ.