ಕೊರೋನಾ ಬಳಿಕ ಸ್ಯಾನಿಟೈಸರ್ ಬಳಕೆ ನಮ್ಮ ದಿನನಿತ್ಯ ಚಟುವಟಿಕೆಗಳ ಭಾಗವೇ ಆಗಿ ಬಿಟ್ಟಿದೆ. ಆದರೆ ಇದರ ವಿಪರೀತ ಬಳಕೆಯೂ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿರಲಿ.
ತ್ವಚೆಯ ಮೇಲಿನ ಬ್ಯಾಕ್ಟೀರಿಯಾಗಳನ್ನು ಇದು ಸಾಯಿಸುತ್ತದೆ ಎಂಬುದೇನೋ ನಿಜ. ಆದರೆ ಅದರೊಂದಿಗೆ ಉತ್ತಮ ಅಂದರೆ ಆರೋಗ್ಯಕರ ಬ್ಯಾಕ್ಟೀರಿಯಾಗಳ ಕೆಲಸಕ್ಕೂ ಇದು ಅಡ್ಡಿಪಡಿಸುತ್ತದೆ.
ಹಾಗಾಗಿ ಸಾಧ್ಯವಾದಾಗೆಲ್ಲ ನೀವು ಸೋಪು ನೀರನ್ನೇ ಬಳಸಿ. ಅನಿವಾರ್ಯವಾದರೆ ಸ್ಯಾನಿಟೈಸರ್ ಬಳಸಿ.
ಸ್ಯಾನಿಟೈಸರ್ ಬಾಟಲಿಯನ್ನು ಹಲವರು ಮುಟ್ಟಿರಬಹುದು. ನೀವು ಮತ್ತೆ ಅದನ್ನೇ ಮುಟ್ಟುವಾಗ ಬ್ಯಾಕ್ಟೀರಿಯಾಗಳು ನಿಮ್ಮ ಕೈಗೆ ಅಂಟಬಹುದು. ಹಾಗಾಗಿ ಸ್ಯಾನಿಟೈಸರ್ ಬಳಸುವ ಮುನ್ನವೂ ಕೈಗಳನ್ನು ತೊಳೆದುಕೊಳ್ಳಿ.
ಹೆಚ್ಚು ಬಾರಿ ಸ್ಯಾನಿಟೈಸರ್ ಗಳನ್ನು ಬಳಸುವುದರಿಂದ ಕೈಗಳು ಡ್ರೈ ಆಗುತ್ತವೆ. ಅದೂ ಈ ಚಳಿಗಾಲದಲ್ಲಿ ತ್ವಚೆ ಬಿರುಕು ಬಿಡುವ ಸಾಧ್ಯತೆಗಳೂ ಇವೆ. ಹೀಗಾಗದಂತೆ ತಡೆಯಲು ಮಾಯಿಸ್ಚರೈಸರ್ ಮಾಡುತ್ತಿರಿ.