ಜನರು ಮುಖದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಆದರೆ ಬೇಸಿಗೆಯಲ್ಲಿ ದೇಹದ ಮೇಲೂ ಗುಳ್ಳೆಗಳಾಗುತ್ತದೆ. ಅದರಲ್ಲೂ ಬೆನ್ನಿನ ಮೇಲೆ ಮೂಡುವ ಗುಳ್ಳೆಗಳಿಂದ ಡೀಪ್ ನೆಕ್ ಬಟ್ಟೆಗಳನ್ನು ಧರಿಸಲು ಮುಜುಗರವಾಗುತ್ತದೆ. ಹಾಗಾಗಿ ಈ ಸಮಸ್ಯೆಯನ್ನು ನಿವಾರಿಸಲು ಸೂಕ್ತ ಮನೆಮದ್ದನ್ನು ಹಚ್ಚಿ.
*ಹಸಿ ಹಾಲು, ಪುದೀನಾ ಪುಡಿ ಮತ್ತು ಸ್ವಲ್ಪ ಅರಶಿನ ಪುಡಿ ಸೇರಿಸಿ ಚರ್ಮಕ್ಕೆ ಹಚ್ಚಿ. ಒಣಗಿದ ಬಳಿಕ ಸ್ನಾನ ಮಾಡಿ. ಹಾಲು ಚರ್ಮವನ್ನು ಶುದ್ಧೀಕರಿಸುತ್ತದೆ. ಪುದೀನಾ ಸತ್ತ ಚರ್ಮಕೋಶಗಳನ್ನು ನಿವಾರಿಸಿ, ಕಲೆಗಳನ್ನು ದೂರಮಾಡುತ್ತದೆ. ಅರಿಶಿನ ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ ಗುಳ್ಳೆಗಳನ್ನು ಗುಣಪಡಿಸುತ್ತದೆ.
ಆರೋಗ್ಯಕ್ಕೆ ಹಿತಕರ ಪೇಯ ‘ಖರ್ಜೂರ-ರಾಗಿ ಮಾಲ್ಟ್’
*ತೆಂಗಿಣ್ಣೆಗೆ ನಿಂಬೆ ಸಿಪ್ಪೆ ಪುಡಿಯನ್ನು ಮಿಕ್ಸ್ ಮಾಡಿ 5 ನಿಮಿಷ ಕುದಿಸಿ ಬಳಿಕ ತಣ್ಣಗಾಗಿಸಿ ಚರ್ಮಕ್ಕೆ ಹಚ್ಚಿ. 1 ಗಂಟೆ ಬಿಟ್ಟು ಸ್ನಾನ ಮಾಡಿ. ಇದು ಟ್ಯಾನಿಂಗ್ ನ್ನು ಕಡಿಮೆ ಮಾಡಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.