alex Certify ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೀರಿನಿಂದ ಸ್ವಚ್ಛಗೊಳಿಸಬೇಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೀರಿನಿಂದ ಸ್ವಚ್ಛಗೊಳಿಸಬೇಡಿ

How To Safely Clean Your Piano Keys - Insure4Music Blog

ಮನೆಯನ್ನು ಹಾಗೂ ಯಾವುದೇ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ನೀರನ್ನು ಬಳಸುತ್ತೇವೆ. ಆದರೆ ಕೆಲವೊಂದು ವಸ್ತುಗಳನ್ನು ಸ್ವಚ್ಛಗೊಳಿಸುವಾಗ ನೀರನ್ನು ಬಳಸಬಾರದು. ಇದರಿಂದ ಆ ವಸ್ತುಗಳು ಹಾಳಾಗುತ್ತವೆ. ಹಾಗಾಗಿ ಆ ವಸ್ತುಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.

*ಆಭರಣಗಳನ್ನು ಸ್ವಚ್ಛ ಮಾಡುವಾಗ ನೀರನ್ನು ಬಳಸಬೇಡಿ, ಇದರಿಂದ ಅದರ ಹೊಳಪು ಕಡಿಮೆಯಾಗುತ್ತದೆ.

*ಮನೆಯಲ್ಲಿ ಲೆದರ್ ನಿಂದ ತಯಾರಿಸಿದ ವಸ್ತುಗಳಿದ್ದರೆ ಅದನ್ನು ನೀರನ್ನು ಬಳಸಿ ಸ್ವಚ್ಛಗೊಳಿಸಬೇಡಿ. ಇದರಿಂದ ಅವಗಳು ಬೇಗನೆ ಹಾಳಾಗುತ್ತದೆ.

* ಮರದಿಂದ ತಯಾರಿಸಿದ ಪೀಠೋಪಕರಣಗಳನ್ನು ನೀರಿನಿಂದ ಸ್ವಚ್ಛಗೊಳಿಸಬೇಡಿ. ಇದರಿಂದ ಅದು ಬೇಗ ಹಾಳಾಗುತ್ತದೆ. ಹಾಗಾಗಿ ಒಣ ಬಟ್ಟೆಯಿಂದ ಒರೆಸಿ.

ಕೂದಲಿಗೆ ಹಚ್ಚಿದ ʼಕಲರ್ʼ ಬಟ್ಟೆಗೆ ತಗುಲಿದ್ದರೆ ಅದನ್ನು ತೆಗೆಯಲು ಇಲ್ಲಿದೆ ಸುಲಭ ಉಪಾಯ

*ರೇಷ್ಮೆ ಬಟ್ಟೆಗಳನ್ನು ನೀರಿನಿಂದ ವಾಶ್ ಮಾಡಬೇಡಿ. ಇದರಿಂದ ಬಟ್ಟೆ ಹಾಳಾಗುತ್ತದೆ. ಅದರ ಬದಲು ಡ್ರೈ ಕ್ಲೀನ್ ಗೆ ನೀಡಿ.

*ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ನೀರನ್ನು ಬಳಸಿ ಸ್ವಚ್ಛ ಮಾಡಬೇಡಿ. ಇದರಿಂದ ಈ ವಸ್ತುಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

*ಸಂಗೀತ ವಾದ್ಯಗಳನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಬೇಡಿ. ಅದನ್ನು ಕ್ಲೀನ್ ಮಾಡಲು ಬಳಸುವಂತಹ ಕ್ಲೀನರ್ ಗಳನ್ನು ಬಳಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...