alex Certify ಈ ಆಹಾರ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಆರೋಗ್ಯಕ್ಕೆ ಹಾನಿ ಖಂಡಿತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಆಹಾರ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಿದರೆ ಆರೋಗ್ಯಕ್ಕೆ ಹಾನಿ ಖಂಡಿತ

ಈ ಕಾಲದಲ್ಲಿ ಆಹಾರ ಪದಾರ್ಥಗಳನ್ನು, ಹಣ್ಣುಗಳು, ತರಕಾರಿಗಳನ್ನು ಸಂರಕ್ಷಿಸಲು ಅವುಗಳನ್ನು ಫ್ರಿಜ್ ಗಳಲ್ಲಿ ಸ್ಟೋರ್ ಮಾಡಿ ಇಡುತ್ತಾರೆ. ಆದರೆ ಕೆಲವೊಂದು ಆಹಾರ ವಸ್ತುಗಳನ್ನು 1 ದಿನಕ್ಕಿಂತ ಹೆಚ್ಚು ಕಾಲ ಫ್ರಿಜ್ ನಲ್ಲಿಟ್ಟು ಸೇವಿಸಬಾರದು. ಅವುಗಳಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.

* ಕಲ್ಲಂಗಡಿ ಹಣ್ಣನ್ನು 1 ದಿನಕ್ಕಿಂತ ಹೆಚ್ಚು ಕಾಲ ಫ್ರಿಜ್ ನಲ್ಲಿ ಇಡಬೇಡಿ, ಇದರಿಂದ ಅವುಗಳ ರುಚಿ ಬದಲಾಗುತ್ತದೆ. ಮತ್ತು ಅದರಲ್ಲಿರುವ ಪೋಷಕಾಂಶಗಳು ನಾಶವಾಗುತ್ತವೆ. ಅದು ಆಮ್ಲೀಯವಾಗಿ ಬದಲಾಗುತ್ತದೆ.

* ಹಸಿ ಆಲೂಗಡ್ಡೆಯನ್ನು ಫ್ರಿಜ್ ನಲ್ಲಿ ಇಡಬಾರದು. ಶೀತದ ತಾಪಮಾನ ಅದರ ರುಚಿಯನ್ನು ಬದಲಾಯಿಸುತ್ತದೆ. ಸಿಪ್ಪೆ ಸುಲಿದು ಇಡುವುದರಿಂದ ಅದರಲ್ಲಿ ಆಸಿಡ್ ಉತ್ಪತ್ತಿಯಾಗುತ್ತದೆ.

* ಜೇನುತುಪ್ಪದಲ್ಲಿ ಸಕ್ಕರೆ ಅಂಶವಿರುವುದರಿಂದ ಅದನ್ನು ಫ್ರಿಜ್ ನಲ್ಲಿ ಸಂಗ್ರಹಿಸುವ ಅಗತ್ಯವಿಲ್ಲ. ಒಂದು ವೇಳೆ ಫ್ರಿಜ್ ನಲ್ಲಿಟ್ಟರೆ ಅದರ ರುಚಿ ಕೆಡುತ್ತದೆ, ಗಟ್ಟಿಯಾಗುತ್ತದೆ.

* ಕಚ್ಚಾ ಬಾಳೆಹಣ್ಣುಗಳನ್ನು ಫ್ರಿಜ್ ನಲ್ಲಿ ಇಡಬಾರದು. ಇದರ ಸಿಪ್ಪೆಯಲ್ಲಿ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದರಿಂದ ಬಾಳೆಹಣ್ಣು ಕಪ್ಪಾಗುತ್ತದೆ. ಇದನ್ನು ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...