ಚಾಟ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಕೆಲವರಿಗೆ ಸಂಜೆ ಹೊತ್ತು ಚಾಟ್ ಸವಿಯದೇ ಹೋದರೆ ಸಮಾಧಾನವೇ ಇರುವುದಿಲ್ಲ.
ಈಗ ಬೇಸಿಗೆ, ಕಲ್ಲಂಗಡಿ ಹಣ್ಣಿನ ಸೀಸನ್ ಆಗಿರುವುದರಿಂದ ಕಲ್ಲಂಗಡಿ ಹಣ್ಣಿನಿಂದ ಸುಲಭವಾಗಿ ಚಾಟ್ ಮಾಡುವುದು ಹೇಗೆ ಅಂತ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು
ಕಲ್ಲಂಗಡಿ ಹಣ್ಣು 1 ಬೌಲ್
(ಸಣ್ಣಗೆ ಹೆಚ್ಚಿದ್ದು)
ದ್ರಾಕ್ಷಿ 1 ಚಿಕ್ಕ ಬೌಲ್
ಕೊತ್ತಂಬರಿ ಸೊಪ್ಪು ಸ್ವಲ್ಪ
ಕಾಳುಮೆಣಸಿನಪುಡಿ 1/2 ಟೀ ಸ್ಪೂನ್
ಜೀರಿಗೆ ಪುಡಿ 1/2 ಟೀ ಸ್ಪೂನ್
ಉಪ್ಪು ಚಿಟಿಕೆಯಷ್ಟು
ಮಾಡುವ ವಿಧಾನ
ಮೊದಲು ಬೌಲ್ ಗೆ ಸಣ್ಣಗೆ ಹೆಚ್ಚಿದ ಕಲ್ಲಂಗಡಿ ಹಣ್ಣನ್ನು ಹಾಕಿಕೊಳ್ಳಬೇಕು. ಅದಕ್ಕೆ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ದ್ರಾಕ್ಷಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಸರ್ವಿಂಗ್ ಬೌಲ್ ಗೆ ಹಾಕಿ ಫಟಾಫಟ್ ಕಲ್ಲಂಗಡಿ ಹಣ್ಣಿನ ಚಾಟ್ ರುಚಿಯನ್ನು ನೋಡಿ.
ಬೇಕಿದ್ದರೆ ಕಾಳು ಮೆಣಸಿನ ಪುಡಿ ಬದಲಾಗಿ ಅಚ್ಚ ಖಾರದ ಪುಡಿ ಬಳಸಬಹುದು. ಹಾಗೇ ದ್ರಾಕ್ಷಿ ಬೇಡ ಎನ್ನುವವರು ನಿಂಬೆ ಹಣ್ಣಿನ ರಸವನ್ನು ಹಿಂಡಬಹುದು.