ಒಂದಿಲ್ಲೊಂದು ಹೊಸ ಐಡಿಯಾವನ್ನ ಹೊತ್ತು ತರುವ ಸ್ಟ್ರೀಟ್ ಫುಡ್ಗಳು ಗ್ರಾಹಕರನ್ನ ಸೆಳೆಯುವ ಪ್ರಯತ್ನದಲ್ಲಿ ವಿಫಲವಾಗೋದೇ ಇಲ್ಲ. ಹಾರುವ ದೋಸೆಯಿಂದ ಹಿಡಿದು ಮರಳಲ್ಲಿ ಬೇಯಿಸುವ ಆಲೂಗಡ್ಡೆಯವರೆಗೆ, ಹಾರುವ ವಡಾಪಾವ್ನಿಂದ ಹಿಡಿದು ಕುರ್ಕುರೆ ಐಸ್ಕ್ರೀಂವರೆಗೆ ಸ್ಟ್ರೀಟ್ ಫುಡ್ ವ್ಯಾಪಾರಿಗಳ ತರಹೇವಾರಿ ಐಡಿಯಾಗಳನ್ನ ನೀವು ನೋಡಬಹುದಾಗಿದೆ. ಇಂತಹದ್ದೇ ಒಂದು ಹೊಸ ಪ್ರಯತ್ನದ ಮೂಲಕ ಇದೀಗ ಮಧ್ಯ ಪ್ರದೇಶದ ಗ್ವಾಲಿಯರ್ ನಗರ ವೈರಲ್ ಆಗ್ತಿದೆ. ಇಲ್ಲಿ ಯಾವುದೇ ಹೊಸ ಮಾದರಿಯ ತಿಂಡಿಯಿಂದಾಗಿ ಅಲ್ಲ ಬದಲಾಗಿ ತಿಂಡಿಯನ್ನ ಪರಿಸರ ಸ್ನೇಹಿ ತಟ್ಟೆಯಲ್ಲಿ ಬಡಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದೆ.
ನಿರಾಶ್ರಿತನ ಮಾನವೀಯತೆಗೆ ಮಾರುಹೋದ ನೆಟ್ಟಿಗರು
ಗ್ವಾಲಿಯರ್ನ ಇಂದರ್ಜೀತ್ ಚೌಕ್ನಲ್ಲಿರುವ ಲೋಹಿಯಾ ಬಜಾರ್ನಲ್ಲಿ ಅವಲಕ್ಕಿಯಿಂದ ಮಾಡಲಾಗುವ ಫೇಮಸ್ ತಿಂಡಿಯನ್ನ ಎಲೆಯಿಂದ ತಯಾರಾದ ಬಟ್ಟಲಿನಲ್ಲಿ ಬಡಿಸಿ ನೀಡಲಾಗುತ್ತದೆ. ಈ ಮೂಲಕ ಪ್ಲಾಸ್ಟಿಕ್ ತಟ್ಟೆಗಳಿಗೆ ಈ ಅಂಗಡಿ ಗುಡ್ ಬೈ ಹೇಳಿದೆ. ಈ ಅಂಗಡಿಯ ಪರಿಸರ ಸ್ನೇಹಿ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ. ಈ ಅಂಗಡಿಯು ಬೆಳಗ್ಗೆ 7 ಗಂಟೆಗೆ ಆರಂಭವಾಗುತ್ತೆ. ಇಲ್ಲಿ ಒಂದು ಪ್ಲೇಟ್ ಪೋಹಾಗೆ 20 ರೂಪಾಯಿ ಬೆಲೆ ಇದೆ.