alex Certify ಪರಿಸರ ಕಾಳಜಿ ಮೆರೆಯುವ ಮೂಲಕ ನೆಟ್ಟಿಗರ ಮನಗೆದ್ದಿದೆ ಈ ಚಾಟ್ ಅಂಗಡಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಸರ ಕಾಳಜಿ ಮೆರೆಯುವ ಮೂಲಕ ನೆಟ್ಟಿಗರ ಮನಗೆದ್ದಿದೆ ಈ ಚಾಟ್ ಅಂಗಡಿ…!

ಒಂದಿಲ್ಲೊಂದು ಹೊಸ ಐಡಿಯಾವನ್ನ ಹೊತ್ತು ತರುವ ಸ್ಟ್ರೀಟ್​ ಫುಡ್​ಗಳು ಗ್ರಾಹಕರನ್ನ ಸೆಳೆಯುವ ಪ್ರಯತ್ನದಲ್ಲಿ ವಿಫಲವಾಗೋದೇ ಇಲ್ಲ. ಹಾರುವ ದೋಸೆಯಿಂದ ಹಿಡಿದು ಮರಳಲ್ಲಿ ಬೇಯಿಸುವ ಆಲೂಗಡ್ಡೆಯವರೆಗೆ, ಹಾರುವ ವಡಾಪಾವ್​ನಿಂದ ಹಿಡಿದು ಕುರ್​ಕುರೆ ಐಸ್​ಕ್ರೀಂವರೆಗೆ ಸ್ಟ್ರೀಟ್ ಫುಡ್​ ವ್ಯಾಪಾರಿಗಳ ತರಹೇವಾರಿ ಐಡಿಯಾಗಳನ್ನ ನೀವು ನೋಡಬಹುದಾಗಿದೆ. ಇಂತಹದ್ದೇ ಒಂದು ಹೊಸ ಪ್ರಯತ್ನದ ಮೂಲಕ ಇದೀಗ ಮಧ್ಯ ಪ್ರದೇಶದ ಗ್ವಾಲಿಯರ್​ ನಗರ ವೈರಲ್​ ಆಗ್ತಿದೆ. ಇಲ್ಲಿ ಯಾವುದೇ ಹೊಸ ಮಾದರಿಯ ತಿಂಡಿಯಿಂದಾಗಿ ಅಲ್ಲ ಬದಲಾಗಿ ತಿಂಡಿಯನ್ನ ಪರಿಸರ ಸ್ನೇಹಿ ತಟ್ಟೆಯಲ್ಲಿ ಬಡಿಸುವ ಮೂಲಕ ನೆಟ್ಟಿಗರ ಮನ ಗೆದ್ದಿದೆ.

ನಿರಾಶ್ರಿತನ ಮಾನವೀಯತೆಗೆ ಮಾರುಹೋದ ನೆಟ್ಟಿಗರು

ಗ್ವಾಲಿಯರ್​ನ ಇಂದರ್​ಜೀತ್​ ಚೌಕ್​​ನಲ್ಲಿರುವ ಲೋಹಿಯಾ ಬಜಾರ್​ನಲ್ಲಿ ಅವಲಕ್ಕಿಯಿಂದ ಮಾಡಲಾಗುವ ಫೇಮಸ್​ ತಿಂಡಿಯನ್ನ ಎಲೆಯಿಂದ ತಯಾರಾದ ಬಟ್ಟಲಿನಲ್ಲಿ ಬಡಿಸಿ ನೀಡಲಾಗುತ್ತದೆ. ಈ ಮೂಲಕ ಪ್ಲಾಸ್ಟಿಕ್​ ತಟ್ಟೆಗಳಿಗೆ ಈ ಅಂಗಡಿ ಗುಡ್​ ಬೈ ಹೇಳಿದೆ. ಈ ಅಂಗಡಿಯ ಪರಿಸರ ಸ್ನೇಹಿ ಪ್ರಯತ್ನಕ್ಕೆ ನೆಟ್ಟಿಗರು ಶಹಬ್ಬಾಸ್​​ ಎಂದಿದ್ದಾರೆ. ಈ ಅಂಗಡಿಯು ಬೆಳಗ್ಗೆ 7 ಗಂಟೆಗೆ ಆರಂಭವಾಗುತ್ತೆ. ಇಲ್ಲಿ ಒಂದು ಪ್ಲೇಟ್​ ಪೋಹಾಗೆ 20 ರೂಪಾಯಿ ಬೆಲೆ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...