ಕೊರೊನಾ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸೂಪ್ ಆರೋಗ್ಯಕ್ಕೆ ಒಳ್ಳೆಯದು. ಮನೆಯಲ್ಲೇ ಟೊಮೊಟೊ ಸೂಪ್ ಮಾಡಿ ಸೇವಿಸಿದ್ರೆ ಸಾಕಷ್ಟು ಪ್ರಯೋಜನವಿದೆ.
ಟೊಮೊಟೊ ಸೂಪ್ ಗೆ ಬೇಕಾಗುವ ಪದಾರ್ಥ:
ಟೊಮ್ಯಾಟೋಸ್ – 5 ರಿಂದ 6
ಶುಂಠಿ – 1 ಇಂಚು
ಕ್ಯಾರೆಟ್ – 1
ಬ್ರೊಕೊಲಿ – 1
ಕ್ರೀಮ್ – 2 ಚಮಚ
ಕಾರ್ನ್ ಪ್ಲೋರ್ – 1 ಚಮಚ
ಬೆಣ್ಣೆ – 1 ಚಮಚ
ಕೊತ್ತಂಬರಿ – 2 ಚಮಚ
ಕರಿಮೆಣಸು – 1/4 ಟೀ ಚಮಚ
ಕಪ್ಪು ಉಪ್ಪು – 1/4 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಟೊಮೊಟೊ ಸೂಪ್ ಮಾಡುವ ವಿಧಾನ :
ಟೊಮೊಟೊ ಸೂಪ್ ತಯಾರಿಸಲು, ಮೊದಲು ಟೊಮೊಟೊಗಳನ್ನು ತೊಳೆದು ಕತ್ತರಿಸಿ. ಟೊಮೊಟೊವನ್ನು ಮಿಕ್ಸಿಗೆ ಹಾಕಿ ಅದಕ್ಕೆ ಶುಂಠಿ ಹಾಕಿ ರುಬ್ಬಿಕೊಳ್ಳಿ. ಈ ಪೇಸ್ಟ್ ಗೆ 3/4 ಕಪ್ ನೀರು ಹಾಕಿ ಜರಡಿ ಹಿಡಿಯಿರಿ. ನಂತ್ರ ಕಾರ್ನ್ ಪ್ಲೋರನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಕಲಸಿಡಿ. ಪ್ಯಾನ್ ಗೆ 2 ಚಮಚ ಬೆಣ್ಣೆ ಹಾಕಿ ಗ್ಯಾಸ್ ಮೇಲಿಟ್ಟು ಬಿಸಿ ಮಾಡಿ. ನಂತರ ಕತ್ತರಿಸಿದ ಬ್ರೊಕೊಲಿ ಮತ್ತು ಕ್ಯಾರೆಟ್ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ.
ಟೊಮೊಟೊ ಮಿಶ್ರಣಕ್ಕೆ ಮೂರೂವರೆ ಕಪ್ ನೀರು ಸೇರಿಸಿ ಕುದಿಸಿರಿ. ಇದಕ್ಕೆ ಕಾರ್ನ್ ಪ್ಲೋರ್ ನೀರು ಹಾಕಿ. ಕರಿಮೆಣಸಿನ ಪುಡಿ, ಮತ್ತು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಮುಚ್ಚಳ ಮುಚ್ಚಿ ಕುದಿಯಲು ಬಿಡಿ. ಕನಿಷ್ಠ 5 ನಿಮಿಷ ಬೇಯಿಸಿ.