alex Certify ಬೇಸಿಗೆಯಲ್ಲಿ ತಂಪನೆಯ ‘ಪಿಸ್ತಾ ಕುಲ್ಫಿ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ತಂಪನೆಯ ‘ಪಿಸ್ತಾ ಕುಲ್ಫಿ’

ಈ ಬಿರು ಬೇಸಿಗೆಯಲ್ಲಿ ತಣ್ಣನೆಯ ಐಸ್ ಕ್ರೀಂ ಅಥವಾ ಕುಲ್ಫಿ ತಿನ್ನೋಕೆ ಎಲ್ಲರಿಗೂ ಇಷ್ಟ. ಅದಕ್ಕೆ ಅಂಗಡಿಗ್ಯಾಕೆ ಹೋಗಬೇಕು. ಮನೆಯಲ್ಲೇ ಆರಾಮಾಗಿ ಮಾಡಬಹುದು. ಹಾಗಿದ್ರೆ ನೋಡಿ ಪಿಸ್ತಾ ಕುಲ್ಫಿ ಮಾಡೋ ವಿಧಾನವನ್ನು.

ಬೇಕಾಗುವ ಸಾಮಗ್ರಿ

ಅರ್ಧ ಲೀಟರ್ ದಪ್ಪ ಹಾಲು

2 ಟೀ ಸ್ಪೂನ್ ಕಾರ್ನ್ ಫ್ಲೋರ್

6 ಟೀ ಸ್ಪೂನ್ ಹಾಲಿನ ಪುಡಿ

10-12 ಟೀ ಸ್ಪೂನ್ ಸಕ್ಕರೆ

ಸ್ವಲ್ಪ ಪಿಸ್ತಾ ಪುಡಿ

ಸ್ವಲ್ಪ ಏಲಕ್ಕಿ ಪುಡಿ

5 ಟೀ ಸ್ಪೂನ್ ಹಾಲಿನ ಕೆನೆ ಅಥವಾ ಕ್ರೀಮ್

ಮಾಡುವ ವಿಧಾನ :

ಒಂದು ಪಾತ್ರೆಯಲ್ಲಿ ಹಾಲನ್ನು ಕಾಯಿಸಿ. ಅದಕ್ಕೆ ಹಾಲಿನಲ್ಲಿ ಕರಗಿದ ಮಿಲ್ಕ್ ಪೌಡರ್ ಹಾಗೂ ಕಾರ್ನ್ ಫ್ಲೋರ್ ಹಾಕಿ ಕದಡಿ. ಬಳಿಕ ಅದಕ್ಕೆ ಸಕ್ಕರೆ ಪುಡಿ, ಏಲಕ್ಕಿ ಪುಡಿ, ಪಿಸ್ತಾ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಸಣ್ಣ ಉರಿಯಲ್ಲಿ 5 ನಿಮಿಷ ಕುದಿಸಿ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಹಾಲಿನ ಕೆನೆ ಅಥವಾ ಕ್ರೀಂ ಅನ್ನು ಹಾಕಿ ಮಿಕ್ಸಿಯಲ್ಲಿ ಚೆನ್ನಾಗಿ ಬ್ಲೆಂಡ್ ಮಾಡಿ. ಬಳಿಕ ಅನ್ನು ಒಂದು ಟ್ರೇ ಅಥವಾ ಕುಲ್ಫಿ ಮೌಲ್ಡಿಗೆ ಹಾಕಿ ಫ್ರೀಜರ್ ನಲ್ಲಿ 6-8 ಗಂಟೆಗಳ ಕಾಲ ಇಡಿ. ಅದಕ್ಕೆ ಬೇಕಾದರೆ ಗೋಡಂಬಿ, ಬಾದಾಮಿ, ಪಿಸ್ತಾಗಳನ್ನು ಹಾಕಿ ಅಲಂಕರಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...