ಬೇಸಿಗೆಯಲ್ಲಿ ಎಲ್ಲರೂ ತಣ್ಣನೆ ಆಹಾರ ಸೇವನೆ ಮಾಡಲು ಇಷ್ಟಪಡ್ತಾರೆ. ಆದ್ರೆ ಈ ಸಂದರ್ಭದಲ್ಲಿ ಹೊರಗಿನ ಆಹಾರ ಸೇವನೆ ಒಳ್ಳೆಯದಲ್ಲ.
ಮನೆಯಲ್ಲಿಯೇ ಮಕ್ಕಳಿಗೆ ಇಷ್ಟವಾಗುವ ಕುಲ್ಫಿ ತಯಾರಿಸಿ ಮನೆ ಮಂದಿಯಲ್ಲ ಸವಿಯಬಹುದು.
ಗುಲ್ಕನ್ ಕುಲ್ಫಿ ಮಾಡಲು ಬೇಕಾಗುವ ಸಾಮಗ್ರಿ :
ಸಕ್ಕರೆ – 70 ಗ್ರಾಂ
ಗುಲ್ಕನ್ – 30 ಗ್ರಾಂ
ಬಾದಾಮಿ – 200 ಗ್ರಾಂ (ನೆನೆಸಿ,ಸಿಪ್ಪೆ ಸುಲಿದ ಬಾದಾಮಿ)
ಗುಲಾಬಿ ಎಲೆಗಳು – 40 ಗ್ರಾಂ
ಫುಲ್‌ಕ್ರೀಮ್ ಹಾಲು – 1 -1/2 ಲೀಟರ್
ಖೋಯಾ – 80 ಗ್ರಾಂ
ಕೇಸರಿ – 8 ರಿಂದ 10
ನೀರು – 3 ಕಪ್
ಗುಲ್ಕನ್ ಕುಲ್ಫಿ ಮಾಡುವ ವಿಧಾನ :
ಅರ್ಧ ಕಪ್ ಹಾಲಿಗೆ ಬಾದಾಮಿ ಸೇರಿಸಿ ಮಿಕ್ಸಿ ಮಾಡಿ. ಬಾಣಲೆಯಲ್ಲಿ ನೀರು, ಸಕ್ಕರೆ ಮತ್ತು ಗುಲಾಬಿ ಎಲೆಗಳನ್ನು ಸೇರಿಸಿ ಪಾಕ ಮಾಡಿ. ಒಂದು ಪಾತ್ರೆಯಲ್ಲಿ 2 ಚಮಚ ಹಾಲು ಮತ್ತು ಕೇಸರಿಯನ್ನು ನೆನೆಸಿ. ಉಳಿದ ಹಾಲನ್ನು ಪ್ರತ್ಯೇಕ ಬಾಣಲೆಯಲ್ಲಿ ಬಿಸಿ ಮಾಡಿ.
ನಂತ್ರ ಹಾಲಿಗೆ ಸಕ್ಕರೆ ಪಾಕ, ಕೇಸರಿ ಹಾಲು, ಗುಲ್ಕನ್ ಮತ್ತು ಬಾದಾಮಿ ಪೇಸ್ಟ್ ಸೇರಿಸಿ ಹಾಲನ್ನು ದಪ್ಪಮಾಡಿ. ಮಿಶ್ರಣ ತಣ್ಣಗಾದ ನಂತರ ಕುಲ್ಫಿ ಅಚ್ಚಿಗೆ ಹಾಕಿ. 4-5 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ.