ಚಾಕಲೇಟ್ ಮಂಚೂರಿಯಿಂದ ಹಿಡಿದು ಖಾರ ಜಿಲೆಬಿಯವರೆಗೆ ಸೋಶಿಯಲ್ ಮೀಡಿಯಾದಲ್ಲಿ ಒಂದಿಲ್ಲೊಂದು ವಿಚಿತ್ರ ಬಗೆಯ ತಿಂಡಿಗಳು ಸುದ್ದಿಯಾಗುತ್ತಲೇ ಇರುತ್ತೆ. ಇದೀಗ ಈ ಸಾಲಿಗೆ ಇನ್ನೊಂದು ವಿಚಿತ್ರವಾದ ತಿನಿಸು ಸೇರಿದೆ.
ಟಿಕ್ಟಾಕ್ನಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ ವ್ಯಕ್ತಿಯೊಬ್ಬ ಆಲೂಗಡ್ಡೆ ಚಿಪ್ಸ್ ನೀರಿನಲ್ಲಿ ಕುದಿಸಿ ಅದರ ನೀರನ್ನ ತೆಗೆದು ಹಿಸುಕಿದ ಆಲೂಗಡ್ಡೆಯನ್ನ ತಯಾರಿಸಿದ್ದಾನೆ.
ಸಾಮಾನ್ಯವಾಗಿ ಆಲೂಗಡ್ಡೆಯಲ್ಲಿ ನೀರಿನಲ್ಲಿ ಬೇಯಿಸಿ ಬಳಿಕ ಅದನ್ನ ಹಿಸುಕಲಾಗುತ್ತೆ. ಆದರೆ ತನ್ನನ್ನ ತಾನು ಅತ್ಯುತ್ತಮ ಬಾಣಸಿಗ ಎಂದು ಕರೆದುಕೊಳ್ಳುವ ಈತ ಚಿಪ್ಸ್ನ್ನ ಬಳಸಿ ಆಲಗಡ್ಡೆಯನ್ನೇ ತಯಾರಿಸಿಬಿಟ್ಟಿದ್ದಾನೆ. ಒಂದು ಪಾತ್ರೆಯಲ್ಲಿ ನೀರು, ಉಪ್ಪು ಹಾಗೂ ವಿನೇಗರ್ನ್ನು ಸೇರಿಸಿ ಅದು ಕುದಿಯಲು ಆರಂಭಿಸಿದ ಬಳಿಕ ಚಿಪ್ಸ್ನ್ನು ಹಾಕಿದ್ದಾನೆ.
ಹಣದಿಂದ ಸಂತೋಷ ಖರೀದಿಸಬಹುದಂತೆ…! ಹೊಸ ಅಧ್ಯಯನದಿಂದ ಬಯಲಾಯ್ತು ಕುತೂಹಲಕಾರಿ ಮಾಹಿತಿ
ಬಳಿಕ ಬೆಂದ ಚಿಪ್ಸ್ಗಳನ್ನ ಹಿಂಡಿ ಆ ನೀರನ್ನ ಕುಡಿಯುತ್ತಾನೆ. ಅಲ್ಲದೇ ಬೆಂದ ಆಲೂಗಡ್ಡೆ ಚಿಪ್ಸ್ನ್ನೂ ತಿನ್ನುತ್ತಾನೆ. ಈ ವಿಚಿತ್ರವನ್ನ ಕಂಡ ನೆಟ್ಟಿಗರು ಯಾವ ವಿಡಿಯೋ ನೋಡಿಯೂ ನಮ್ಮ ಹೊಟ್ಟೆ ಇಷ್ಟರ ಮಟ್ಟಿಗೆ ಹಾಳಾಗಿರಲಿಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಇಷ್ಟೆಲ್ಲ ಸಾಹಸ ಮಾಡುವ ಬದಲು ಅಂಗಡಿಗೆ ಹೋಗಿ ಆಲೂಗಡ್ಡೆಯನ್ನೇ ಖರೀದಿ ಮಾಡು. ಚಿಪ್ಸ್ಗಿಂತ ಅಗ್ಗದ ದರದಲ್ಲಿ ಆಲೂಗಡ್ಡೆಯೇ ಸಿಗುತ್ತೆ ಎಂದು ಸಲಹೆ ನೀಡಿದ್ದಾರೆ.