ಬೇಕಾಗುವ ಪದಾರ್ಥಗಳು :
1 ಕಪ್ ಕುರ್ ಕುರೆ, 2 ಚೀಸ್ ಕ್ಯೂಬ್ಸ್, 4 ಚಮಚ ಮೈದಾ, 2 ಕಪ್ ಹಾಲು, 2-3 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು-ಮೆಣಸು, 1 ಮೊಟ್ಟೆ, 3 ಚಮಚ ಬೆಣ್ಣೆ.
ತಯಾರಿಸುವ ವಿಧಾನ :
ಮೊಟ್ಟೆ ಒಡೆದು ಗೊಟಾಯಿಸಿ, 2 ಚಮಚ ಬೆಣ್ಣೆ ಬಿಸಿ ಮಾಡಿ. ಪ್ರತಿಯೊಂದು ಕುರ್ ಕುರೆಯನ್ನೂ ಮೊಟ್ಟೆಯಲ್ಲಿ ಅದ್ದಿ, ಬಿಸಿ ಬೆಣ್ಣೆಯಲ್ಲಿ ಕರಿಯಿರಿ. ಇವನ್ನು ಬಟರ್ ಪೇಪರ್ ಮೇಲೆ ಹರಡಿಕೊಳ್ಳಿ. ಅದೇ ಬಾಣಲಿಗೆ ಉಳಿದ ಬೆಣ್ಣೆ ಸೇರಿಸಿ, ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ.
ಇದಕ್ಕೆ ತುರಿದ ಚೀಸ್, ಉಪ್ಪು-ಖಾರ ಸೇರಿಸಿ ಕೈಯಾಡಿಸಿ. ಮೈದಾಗೆ ತುಸು ಬೆಚ್ಚಗಿನ ನೀರು ಬೆರೆಸಿ ಕದಡಿಕೊಂಡು ಬಾಣಲೆಗೆ ಬೆರೆಸಿ, ಎಲ್ಲವೂ ಕಲೆತು ಕುದಿ ಬರುವಂತೆ ಮಾಡಿ. ಇದಕ್ಕೆ ಕರಿದ ಕುರ್ ಕುರೆ ಬೆರೆಸಿ ಒಮ್ಮೆ ಕೆದಕಿ ಕೆಳಗಿಳಿಸಿ. ಇದನ್ನು ತಕ್ಷಣ ರೊಟ್ಟಿ, ಚಪಾತಿಗಳೊಂದಿಗೆ ಸವಿದರೆ, ಕುರ್ ಕುರೆಯ ಕ್ರಂಚಿನೆಸ್ ಉಳಿಯುತ್ತದೆ.