ಮನೆಯಲ್ಲಿ ಫ್ರಿಜ್ ಇಲ್ಲ. ಐಸ್ ಕ್ರೀಂ ಮಾಡಲು ಆಗೋದಿಲ್ಲ ಎನ್ನುವ ಚಿಂತೆ ಇನ್ನು ಮುಂದೆ ಬೇಡ. ಫ್ರಿಜ್ ಇಲ್ಲದೆ ಐಸ್ ಕ್ರೀಂ ಮಾಡೋದು ಹೇಗೆ ಎನ್ನೋದನ್ನು ನಾವು ಹೇಳ್ತೇವೆ.
ಐಸ್ ಕ್ರೀಂ ಮಾಡಲು ಬೇಕಾಗುವ ಪದಾರ್ಥಗಳು:
ಅರ್ಧ ಕಪ್ ಹಾಲು, ಮೂರು ಟೀ ಸ್ಫೂನ್ ಸಕ್ಕರೆ, ಒಂದು ಚಿಟಕಿ ಉಪ್ಪು, 12-15 ಐಸ್ ಕ್ಯೂಬ್, ಅರ್ಧ ಕಪ್ ಕಲ್ಲುಪ್ಪು. ಅರ್ಧ ಕಪ್ ಚಾಕೊಲೇಟ್ ಕ್ರಂಚ್, ಎರಡು ಪ್ಲಾಸ್ಟಿಕ್ ಜಿಪ್ ಬ್ಯಾಗ್. ( ಒಂದು ದೊಡ್ಡದು, ಒಂದು ಚಿಕ್ಕದು.)
ಐಸ್ ಕ್ರೀಂ ಮಾಡುವ ವಿಧಾನ:
ಮೊದಲು ಸಣ್ಣ ಪ್ಲಾಸ್ಟಿಕ್ ಚೀಲದಲ್ಲಿ ಹಾಲು, ಸಕ್ಕರೆ ಮತ್ತು ಉಪ್ಪನ್ನು ಹಾಕಿ ಜಿಪ್ ಹಾಕಿಡಿ. ನಂತ್ರ ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಐಸ್ ಕ್ಯೂಬ್ ಹಾಕಿ ಅದಕ್ಕೆ ಕಲ್ಲುಪ್ಪು ಬೆರೆಸಿ, ಅದರೊಳಗೆ ಸಣ್ಣ ಪ್ಲಾಸ್ಟಿಕ್ ಬ್ಯಾಗ್ ಹಾಕಿ ಜಿಪ್ ಹಾಕಿಡಿ. ಪ್ಲಾಸ್ಟಿಕ್ ಬ್ಯಾಗ್ ನಲ್ಲಿರುವ ಹಾಲು ಸಕ್ಕರೆ ಮಿಶ್ರಣ ಗಟ್ಟಿಯಾಗುವವರೆಗೆ ಅಲ್ಲಾಡಿಸಬೇಡಿ.
ಮಿಶ್ರಣ ಗಟ್ಟಿಯಾದ ನಂತ್ರ ದೊಡ್ಡ ಪ್ಲಾಸ್ಟಿಕ್ ಬ್ಯಾಗ್ ನಿಂದ ಸಣ್ಣ ಪ್ಲಾಸ್ಟಿಕ್ ಬ್ಯಾಗನ್ನು ತೆಗೆದು, ಮಿಶ್ರಣಕ್ಕೆ ಚಾಕೊಲೇಟ್ ಕ್ರಂಚ್ ಬೆರೆಸಿದ್ರೆ ಮುಗೀತು. ನಿಮ್ಮ ಐಸ್ ಕ್ರೀಂ ಸರ್ವ್ ಮಾಡಲು ರೆಡಿ.