alex Certify ಚಳಿಗಾಲಕ್ಕೆ ಬೇಕು ಬಿಸಿ ಬಿಸಿ ʼಕ್ಯಾಬೇಜ್ʼ ಪಕೋಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲಕ್ಕೆ ಬೇಕು ಬಿಸಿ ಬಿಸಿ ʼಕ್ಯಾಬೇಜ್ʼ ಪಕೋಡ

ಪಕೋಡ ಅಂದ್ರೆ ಸಾಕು ಎಲ್ಲರ ಬಾಯಲ್ಲೂ ನೀರೂರುತ್ತೆ. ಈರುಳ್ಳಿ ಪಕೋಡ ಅಥವಾ ಕಾಂದಾ ಬಜೆ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರೋ ಸ್ನಾಕ್ಸ್. ಕ್ಯಾಬೇಜ್ ಪಕೋಡ ಕೂಡ ಸಖತ್ ಟೇಸ್ಟಿಯಾಗಿರುತ್ತೆ. ಹಬ್ಬಗಳ ಸಮಯದಲ್ಲಿ ಕೆಲವು ಮನೆಗಳಲ್ಲಿ ಈರುಳ್ಳಿ ಬಳಸುವುದಿಲ್ಲ. ಆಗ ಈರುಳ್ಳಿ ಹಾಕದೇ ಕ್ಯಾಬೇಜ್ ಪಕೋಡ ಮಾಡಬಹುದು. ಟೊಮೆಟೋ ಸಾಸ್ ಜೊತೆಗೆ ಪಕೋಡ ಸವಿಯುವ ಮಜಾನೇ ಬೇರೆ.

ಬೇಕಾಗುವ ಸಾಮಗ್ರಿ : ಸಣ್ಣಗೆ ಹೆಚ್ಚಿದ 2 ಕಪ್ ಕ್ಯಾಬೇಜ್, ಸಣ್ಣಗೆ ಹೆಚ್ಚಿದ ಒಂದು ಈರುಳ್ಳಿ, ಮುಕ್ಕಾಲು ಕಪ್ ಕಡಲೆ ಹಿಟ್ಟು, ಕಾಲು ಕಪ್ ಅಕ್ಕಿ ಹಿಟ್ಟು, ಒಂದು ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಅರಿಶಿನ, ಚಿಟಿಕೆ ಇಂಗು, 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಕರಿಬೇವಿನ ಎಲೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ : ಒಂದು ಬೌಲ್ ನಲ್ಲಿ ಹೆಚ್ಚಿದ ಕ್ಯಾಬೇಜ್, ಈರುಳ್ಳಿ ಹಾಕಿ. ಅದಕ್ಕೆ ಕಡಲೆಹಿಟ್ಟು, ಅಕ್ಕಿ ಹಿಟ್ಟನ್ನು ಕೂಡ ಹಾಕಿಕೊಳ್ಳಿ. ಅಚ್ಚಖಾರದ ಪುಡಿ, ಅರಿಶಿನ, ಇಂಗು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಕರಿಬೇವಿನ ಎಲೆ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈರುಳ್ಳಿ ಮತ್ತು ಕ್ಯಾಬೇಜ್ ಅನ್ನು ಚೆನ್ನಾಗಿ ಹಿಸುಕಿದರೆ ಅದರಿಂದ ನೀರಿನ ಅಂಶ ಹೊರಬರುತ್ತದೆ. ಹಿಟ್ಟನ್ನು ಕಲೆಸಲು ಸುಲಭವಾಗುತ್ತದೆ. ಅಗತ್ಯವಿದ್ದಲ್ಲಿ 2 ಚಮಚ ನೀರು ಬೆರೆಸಬಹುದು. ರೆಡಿ ಮಾಡಿದ ಹಿಟ್ಟನ್ನು ಸಣ್ಣಸಣ್ಣ ಉಂಡೆಗಳನ್ನಾಗಿ ಮಾಡಿ ಬಿಸಿ ಎಣ್ಣೆಯಲ್ಲಿ ಬಿಡಿ. ಮಧ್ಯಮ ಉರಿಯಲ್ಲಿ ಪಕೋಡ ಗರಿಗರಿಯಾಗುವವರೆಗೆ ಹೊಂಬಣ್ಣಕ್ಕೆ ಬರುವವರೆಗೆ ಕರಿಯಿರಿ. ಗರಿಗರಿಯಾದ ಕ್ಯಾಬೇಜ್ ಪಕೋಡವನ್ನು ಟೊಮೆಟೋ ಸಾಸ್ ಜೊತೆಗೆ ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...