alex Certify ದಿಢೀರ್ ತಯಾರಿಸಬಹುದಾದ ‘ಕೋಕಾನಟ್ ಕುಕ್ಕೀಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಿಢೀರ್ ತಯಾರಿಸಬಹುದಾದ ‘ಕೋಕಾನಟ್ ಕುಕ್ಕೀಸ್’

ಬೇಕಾಗುವ ಪದಾರ್ಥಗಳು :

1 ಕಪ್ ಕೊಬ್ಬರಿ ತುರಿ, 1 ಕಪ್ ಸಕ್ಕರೆ, ಅರ್ಧ ಕಪ್ ಮೈದಾ, 3 ಮೊಟ್ಟೆ, 2 ಚಿಟಕಿ ಉಪ್ಪು, ಸ್ವಲ್ಪ ವೆನಿಲಾ ಎಸೆನ್ಸ್

ಮಾಡುವ ವಿಧಾನ :

ಒಡೆದ ಮೊಟ್ಟೆಗೆ ಉಪ್ಪು ಹಾಕಿ ತಿರುಗಿಸಿ ನಂತರ ನಿಧಾನವಾಗಿ ಸಕ್ಕರೆ ಸೇರಿಸುತ್ತಾ ಮತ್ತೆ ತಿರುಗಿಸಿ. ಕೊನೆಯಲ್ಲಿ ವೆನಿಲಾ ಎಸೆನ್ಸ್, ಮೈದಾ, ಕೊಬ್ಬರಿ ತುರಿ ಸೇರಿಸಿ ಎಲ್ಲವೂ ಚೆನ್ನಾಗಿ ಮಿಕ್ಸ್ ಆಗುವಂತೆ ಮಾಡಿ.

2 ಚಮಚ ತುಪ್ಪ ಹಾಕಿ ನಾದಿಕೊಂಡು, ಜಿಡ್ಡು ಸವರಿದ ಟ್ರೇ ನಲ್ಲಿ ಸ್ವಲ್ಪ ಸ್ವಲ್ಪವೇ ಬರುವಂತೆ ಹರಡಿಕೊಳ್ಳಿ. ಬಳಿಕ ಓವನ್ ನಲ್ಲಿ​ 140 ಡಿಗ್ರಿ ಶಾಖದಲ್ಲಿ ಬೇಕ್ ಮಾಡಿ. ಹೊರಗೆ ತೆಗೆದು ಆರಿದ ನಂತರ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...