ಬೇಕಾಗುವ ಪದಾರ್ಥಗಳು :
1 ಕಪ್ ಮೈದಾ, ಬೆಣ್ಣೆ, ಪುಡಿ ಸಕ್ಕರೆ ಅರ್ಧ ಕಪ್, ಅರ್ಧ ಚಮಚ ಬೇಕಿಂಗ್ ಪೌಡರ್, 1 ದೊಡ್ಡ ಚಮಚ ಕೋಕೋ ಪೌಡರ್, 1 ಮೊಟ್ಟೆ, ಅಗತ್ಯವಿದ್ದಷ್ಟು ಚಾಕೋಲೇಟ್ ತುಂಡು, ಹಾಲು.
ಮಾಡುವ ವಿಧಾನ :
ಕನ್ವೆಕ್ಷನ್ ಮೋಡ್ ನಲ್ಲಿ ಓವನ್ ನ್ನು 180 ಡಿಗ್ರಿ ಶಾಖದಲ್ಲಿ ಪ್ರೀ ಹೀಟ್ ಮಾಡಬೇಕು. ಮೊಟ್ಟೆ ಒಡೆದು ನೊರೆ ಬರುವವರೆಗೂ ಬಿಸಿ ಮಾಡಿಕೊಂಡು ಇದಕ್ಕೆ ಸಕ್ಕರೆ, ಬೆಣ್ಣೆ ಹಾಕಿ ಚೆನ್ನಾಗಿ ಗೊಟಾಯಿಸಿ. ನಂತರ ಇದಕ್ಕೆ ಉಳಿದ ಸಾಮಗ್ರಿ ಸೇರಿಸಿ ಮೃದುವಾಗಿ ಹಿಟ್ಟು ಕಲೆಸಿಡಿ.
ಇದಕ್ಕೆ ತುಸು ತುಪ್ಪ ಸೇರಿಸಿ ಚೆನ್ನಾಗಿ ನಾದಿಕೊಳ್ಳಿ. 1 ತಾಸು ಹಾಗೇ ನೆನೆಯಲು ಬಿಡಿ. ನಂತರ ಮತ್ತೆ ತುಪ್ಪದಿಂದ ನಾದಿದ ನಂತರ, ದಪ್ಪ ಚಪಾತಿಯಾಗಿ ಲಟ್ಟಿಸಿ. ಬಿಸ್ಕೆಟ್ ಕಟರ್ ಸಹಾಯದಿಂದ ಕುಕೀಸ್ ಕತ್ತರಿಸಿ. ಜಿಡ್ಡು ಸವರಿದ ಓವನ್ ಪ್ರೂಫ್ ಟ್ರೇ ನಲ್ಲಿ ಮಧ್ಯೆ ತುಸು ಅಂತರ ಬರುವಂತೆ ಇವನ್ನು ಜೋಡಿಸಿ. ನಂತರ ಈ ಟ್ರೇಯನ್ನು ಕನ್ವೆಕ್ಷನ್ ನಲ್ಲಿ 180 ಡಿಗ್ರಿ ಶಾಖದಲ್ಲಿ 15-20 ನಿಮಿಷ ಹದನಾಗಿ ಬೇಕ್ ಮಾಡಿ. ಹೊರ ತೆಗೆದು ತುಸು ಆರಲು ಬಿಡಿ. ನಂತರ ಸವಿಯಿರಿ.