
ಬೇಕಾಗುವ ಸಾಮಾಗ್ರಿಗಳು: ಹೆಸರುಬೇಳೆ- 1 ಕಪ್ , ಬೆಲ್ಲ- 2ಕಪ್, ತೆಂಗಿನಕಾಯಿ-1, ಏಲಕ್ಕಿ, ದ್ರಾಕ್ಷಿ, ಗೋಡಂಬಿ, ತುಪ್ಪ
ಮಾಡುವ ವಿಧಾನ: ಒಂದು ಕಪ್ ನಷ್ಟು ತೆಗೆದುಕೊಂಡ ಹೆಸರುಬೇಳೆಯನ್ನು ಹುರಿಯಬೇಕು. ಕೆಂಪಾಗುವಷ್ಟು ಹುರಿದರೆ ಸಾಕು. ಬಳಿಕ ಬೇರೆ ಪಾತ್ರೆಗೆ ವರ್ಗಾಯಿಸಬೇಕು. ತಣ್ಣಗಾದ ಬಳಿಕ ಚೆನ್ನಾಗಿ ಇದನ್ನು ತೊಳೆಯಬೇಕು. ಕುಕ್ಕರ್ ಗೆ ಹೆಸರುಬೇಳೆ ಹಾಕಿ 3 ಗ್ಲಾಸ್ ನಷ್ಟು ನೀರು ಹಾಕಬೇಕು. ಪಾಯಸ ಜಾಸ್ತಿ ನೀರಾಗಬಾರದು. ಹಾಗಾಗಿ ಕಡಿಮೆ ನೀರು ಉಪಯೋಗಿಸಿ. 4 ವಿಸಿಲ್ ಹಾಕಿ ಬೇಯಿಸಿ.
ಒಂದು ಪ್ಯಾಕ್ ಬ್ರೆಡ್ ಇದ್ದರೆ ಥಟ್ಟಂತ ರೆಡಿಯಾಗುತ್ತೆ ಈ ತಿಂಡಿ…!
ಬಳಿಕ ಒಂದು ಸಣ್ಣ ಹಸಿಕಾಯಿಯನ್ನು ತುರಿದು ಹಾಲು ತೆಗೆಯಬೇಕು. ಬೆಂದ ಹೆಸರುಬೇಳೆಗೆ 2 ಕಪ್ ನಷ್ಟು ತುರಿದ ಬೆಲ್ಲ ಹಾಕಬೇಕು. ಬೆಲ್ಲ ಎಲ್ಲ ಕರಗಿ ಚೆನ್ನಾಗಿ ಕುದಿ ಬಂದಾಗ ಕಾಯಿಹಾಲು ಸೇರಿಸಿ, ಇದು ಚೆನ್ನಾಗಿ ಕುದಿ ಬಂದಾಗ ಕುಟ್ಟಿದ ಏಲಕ್ಕಿ ಪುಡಿ ಹಾಕಿ ಪಾಯಸವನ್ನು ಸರ್ವಿಂಗ್ ಬೌಲ್ ಗೆ ಶಿಫ್ಟ್ ಮಾಡಿ. ಇನ್ನು ದ್ರಾಕ್ಷಿ, ಗೋಡಂಬಿಯನ್ನು ತುಪ್ಪದಲ್ಲಿ ಹುರಿದು ಪಾಯಸಕ್ಕೆ ಮಿಕ್ಸ್ ಮಾಡಿದರೆ ಸವಿಯಲು ರುಚಿ ರುಚಿಯಾದ ಹೆಸರುಬೇಳೆ ಪಾಯಸ ಸಿದ್ಧ.