ಈದ್ ಹಬ್ಬದಲ್ಲಿ ಇದನ್ನು ಮಾಡಲಾಗುತ್ತದೆ. ಸಕ್ಕರೆ, ಶ್ಯಾವಿಗೆ, ಖರ್ಜೂರ ಸೇರಿಸಿ ಮಾಡುವ ಒಂದು ಸಿಹಿಯಾದ ಖಾದ್ಯ. ಮಾಡುವುದಕ್ಕೂ ಸುಲಭ. ತಿನ್ನುವುದಕ್ಕೂ ತುಂಬಾ ಚೆನ್ನಾಗಿರುತ್ತದೆ.
ಒಂದು ಬಾಣಲೆಗೆ 1 ½ ಟೇಬಲ್ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ ಸ್ವಲ್ಪ ಪಿಸ್ತಾ, ಬಾದಾಮಿ, ವಾಲ್ ನಟ್ ಹಾಕಿ ಸ್ವಲ್ಪ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 7 ಖರ್ಜೂರವನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿ.
ನಂತರ ಅದಕ್ಕೆ 1 ಲೀಟರ್ ಹಾಲು ಹಾಕಿ. ಚಿಟಿಕೆ, ಕೇಸರಿ, 1 ಟೀ ಸ್ಪೂನ್ ಏಲಕ್ಕಿ ಪುಡಿ, ½ ಕಪ್ ಸಕ್ಕರೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಹಾಲು ಅರ್ಧ ಲೀಟರ್ ಆಗುವವರೆಗೆ ಕುದಿಸಿಕೊಂಡು ಗ್ಯಾಸ್ ಆಫ್ ಮಾಡಿ.
ನಂತರ ಒಂದು ಪ್ಯಾನ್ ಗೆ 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಅದಕ್ಕೆ 1 ಮುಷ್ಟಿಯಷ್ಟು ಶ್ಯಾವಿಗೆ ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಕುದಿಸಿಟ್ಟುಕೊಂಡ ಹಾಲು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು 8 ನಿಮಿಷಗಳ ಕಾಲ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.