alex Certify ಜಿಟಿ ಜಿಟಿ ಮಳೆಗೆ ಗರಿ ಗರಿ ಕ್ಯಾಬೇಜ್ ಪಕೋಡಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಟಿ ಜಿಟಿ ಮಳೆಗೆ ಗರಿ ಗರಿ ಕ್ಯಾಬೇಜ್ ಪಕೋಡಾ

ಸಂಜೆ ಟೀ ಸಮಯಕ್ಕೆ ಏನಾದರೂ ತಿನ್ನಬೇಕು ಅನಿಸುತ್ತೆ. ಹೊರಗಡೆ ಮಳೆ ಬರುತ್ತಿದ್ದರೆ ಬಜ್ಜಿ ಬೋಂಡಾ ಇದ್ದರೆ ಹೊಟ್ಟೆಗೆ ಹೋಗಿದ್ದೇ ತಿಳಿಯುವುದಿಲ್ಲ. ಕ್ಯಾಬೇಜ್ ಬಳಸಿ ರುಚಿಕರವಾದ ಪಕೋಡಾ ಮಾಡುವ ವಿಧಾನ ಇಲ್ಲಿದೆ ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:

¾ ಕಪ್ – ಕಡಲೆಬೇಳೆ, 2 ½ ಕಪ್ – ಕ್ಯಾಬೇಜ್ ಸಣ್ಣಗೆ ಹೆಚ್ಚಿಟ್ಟುಕೊಂಡಿದ್ದು, 1 ಟೀ ಸ್ಪೂನ್ – ಶುಂಠಿ ಪೇಸ್ಟ್, ¾ ಟೀ ಸ್ಪೂನ್ – ಗರಂ ಮಸಾಲ, ¼ ಟೀ ಸ್ಪೂನ್ – ಖಾರದಪುಡಿ, ಒಂದು ಹಿಡಿ – ಪುದೀನಾ ಎಲೆ, 2 – ಹಸಿಮೆಣಸು ಹೆಚ್ಚಿಟ್ಟುಕೊಂಡಿದ್ದು, 2 ಟೇಬಲ್ ಸ್ಪೂನ್ – ಅಕ್ಕಿಹಿಟ್ಟು, ಉಪ್ಪು – ರುಚಿಗೆ ತಕ್ಕಷ್ಟು, ಒಂದು ಹಿಡಿ – ಕೊತ್ತಂಬರಿಸೊಪ್ಪು.

ಮಾಡುವ ವಿಧಾನ:

ಮೊದಲಿಗೆ ಕಡಲೆಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆಗಳ ಕಾಲ ನೆನೆಸಿಟ್ಟು ಒಂದು ಮಿಕ್ಸಿ ಜಾರಿನಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಿ. ನಂತರ ಒಂದು ದೊಡ್ಡ ಬೌಲ್ ಗೆ ಕತ್ತರಿಸಿದ ಕ್ಯಾಬೇಜ್, ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿಮೆಣಸು, ಶುಂಠಿ, ಉಪ್ಪು, ಗರಂ ಮಸಾಲ, ಖಾರದ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಅಕ್ಕಿ ಹಿಟ್ಟು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಮಿಕ್ಸ್ ಮಾಡಿ. ಹಿಟ್ಟು ನೀರಾಗಿದ್ದರೆ ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ. ನಂತರ ಗ್ಯಾಸ್ ಮೇಲೆ ಎಣ್ಣೆ ಕಾಯಲು ಇಟ್ಟು ಸ್ವಲ್ಪ ಸ್ವಲ್ಪವೇ ಹಿಟ್ಟು ತೆಗೆದುಕೊಂಡು ಕೈಯಿಂದ ನಿಧಾನಕ್ಕೆ ಒತ್ತಿ ಕಾದ ಎಣ್ಣೆಯಲ್ಲಿ ಕರಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...