ಕೆಲವರಿಗೆ ದಪ್ಪಗಿನ ಮೊಸರು ತಿನ್ನುವುದು ಎಂದರೆ ತುಂಬಾ ಇಷ್ಟವಿರುತ್ತದೆ. ಎಷ್ಟೇ ದಪ್ಪಗಿನ ಹಾಲು ಇದ್ದರೂ ಕೆಲವೊಮ್ಮೆ ಮೊಸರು ಸರಿಯಾಗಿ ಬರುವುದಿಲ್ಲ. ಹಾಗಾಗಿ ಇಲ್ಲಿ ಸುಲಭವಾಗಿ ತೆಳುವಾದ ಹಾಲಿನಿಂದ ಮೊಸರು ಮಾಡುವ ವಿಧಾನ ಇದೆ ಒಮ್ಮೆ ಟ್ರೈ ಮಾಡಿ ನೋಡಿ.
ಅರ್ಧ ಲೀಟರ್ ತೆಳುವಾದ ಹಾಲನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಕುದಿಸಿ ನಂತರ ಗ್ಯಾಸ್ ಆಫ್ ಮಾಡಿ. ಇದು ಹದ ಬಿಸಿ ಇರುವಾಗ ಒಂದು ಚೆನ್ನಾಗಿ ತೊಳೆದ ಲೋಟ ತೆಗೆದುಕೊಂಡು ಹಾಲನ್ನು ಈ ಲೋಟದ ಸಹಾಯದಿಂದ ಮೇಲೆ ಕೆಳಗೆ ಮಾಡಿಕೊಳ್ಳಿ. ಹೀಗೆ ಮಾಡುವಾಗ ನೊರೆ ಬರಬೇಕು. 8 ರಿಂದ 10 ಸಲ ಹೀಗೆ ಮಾಡಿದರೆ ಸಾಕು.
ನಂತರ ಒಂದು ಲೋಟಕ್ಕೆ 2 ಚಮಚ ಮೊಸರು ಹಾಕಿ ಅದಕ್ಕೆ 2 ಚಮಚ ಹಾಲನ್ನು ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಈ ಹೆಪ್ಪನ್ನು ಹಾಲಿಗೆ ಸೇರಿಸಿಕೊಂಡು ನೊರೆ ಕದಡದಂತೆ ನಿಧಾನಕ್ಕೆ ಮಿಕ್ಸ್ ಮಾಡಿ ಮುಚ್ಚಿಡಿ. ಎರಡು ಗಂಟೆಯ ನಂತರ ತೆಗೆದು ನೋಡಿದರೆ ದಪ್ಪಗಿನ ಮೊಸರು ರೆಡಿಯಾಗುತ್ತದೆ.