alex Certify ‘ಓಕೆ’ ಶಬ್ಧದ ಫುಲ್ ಫಾರ್ಮ್ ಏನು ಗೊತ್ತಾ….? ಇಲ್ಲಿದೆ ಅದ್ರ ಇತಿಹಾಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಓಕೆ’ ಶಬ್ಧದ ಫುಲ್ ಫಾರ್ಮ್ ಏನು ಗೊತ್ತಾ….? ಇಲ್ಲಿದೆ ಅದ್ರ ಇತಿಹಾಸ

ಓಕೆ. ಇದು ಅತಿಹೆಚ್ಚ ಬಳಕೆಯಲ್ಲಿರುವ ಶಬ್ಧ. ಮನೆಯಲ್ಲಿರಲಿ, ಕಚೇರಿಯಲ್ಲಿರಲಿ, ಸ್ನೇಹಿತರ ಜೊತೆಗಿರಲಿ ನಾವು ಈ ಓಕೆ ಶಬ್ಧವನ್ನು ಆಗಾಗ ಬಳಸುತ್ತಿರುತ್ತೇವೆ. ಆಡುಮಾತಿನ ಪದವಾಗಿರುವ ಈ ಓಕೆ ಬಗ್ಗೆ ಇಂದು ಒಂದಿಷ್ಟು ಮಾಹಿತಿ ಇಲ್ಲಿದೆ.

ಇಂಗ್ಲಿಷ್ ಭಾಷೆಯ ಸಾಮಾನ್ಯ ಪದಗಳಲ್ಲಿ ಓಕೆ ಒಂದು. ಸ್ವೀಕಾರ, ಒಪ್ಪಂದ, ಅನುಮೋದನೆ ಬದಲು ಓಕೆ ಪದವನ್ನು ಬಳಸಲಾಗುತ್ತದೆ. ಓಕೆ ಎಂದರೆ ‘Olla Kalla’. ಇದು ಗ್ರೀಕ್ ಪದ. ಇದರರ್ಥ ಎಲ್ಲವೂ ಸರಿಯಾಗಿದೆ. ಓಕೆ ಎಂಬ ಪದವು 182 ವರ್ಷಗಳ ಹಿಂದಿನದ್ದು. ಅಮೆರಿಕಾದ ಪತ್ರಕರ್ತ ಚಾರ್ಲ್ಸ್ ಗಾರ್ಡನ್ ಗ್ರೀನ್ ಶುರು ಮಾಡಿದ್ದರು. 1839 ರಲ್ಲಿ ಲೇಖಕನು ಉದ್ದೇಶಪೂರ್ವಕವಾಗಿ ಪದಗಳನ್ನು ಬದಲಾಯಿಸುತ್ತಿದ್ದನು. ಓಕೆ ಮೊದಲು Oll Korrect ನ ಸಂಕ್ಷಿಪ್ತ ರೂಪವಾಗಿ ಬಳಕೆಯಾಯ್ತು. ಇದು ವ್ಯಾಕರಣದ ವಿಡಂಬನಾತ್ಮಕ ಲೇಖನವಾಗಿದ್ದು, 1839 ರಲ್ಲಿ ಬೋಸ್ಟನ್ ಮಾರ್ನಿಂಗ್ ಪೋಸ್ಟ್ ನಲ್ಲಿ ಲೇಖನ ಪ್ರಕಟವಾಯಿತು. ಇದರ ನಂತರ OW ನಂತಹ ಪದ ಸಹ ಬಳಕೆಗೆ ಬಂತು.

ನಂತ್ರ ಓಕೆಯನ್ನು ಚುನಾವಣಾ ಘೋಷಣೆಯಾಗಿ ಬಳಸಲಾಯಿತು. 1840 ರಲ್ಲಿ ಅಮೆರಿಕಾದ ಅಧ್ಯಕ್ಷ ಮಾರ್ಟಿನ್ ವ್ಯಾನ್ ಬುರೆನ್  ಮರು-ಚುನಾವಣಾ ಪ್ರಚಾರದಲ್ಲಿ ಓಕೆ ಎಂಬ ಪದವನ್ನು ಬಳಸಿದಾಗ, ಇದು ಪ್ರಪಂಚದಾದ್ಯಂತ ಜನಪ್ರಿಯವಾಯಿತು. ನ್ಯೂಯಾರ್ಕ್‌ನ ಕಿಂಡರ್‌ಹೂಕ್‌ನಲ್ಲಿ ಜನಿಸಿದ ವ್ಯಾನ್ ಬುರೆನ್ ಅವರಿಗೆ  ಓಲ್ಡ್ ಕಿಂಡರ್‌ಹೂಕ್ ಎಂಬ ಅಡ್ಡ ಹೆಸರಿತ್ತು. ಅವರ ಬೆಂಬಲಿಗರು ಚುನಾವಣಾ ಪ್ರಚಾರದ ಸಮಯದಲ್ಲಿ ರ್ಯಾಲಿಗಳಲ್ಲಿ ಇದನ್ನು ಚಿಕ್ಕದು ಮಾಡಿ ಓಕೆ ಬಳಸಿದರು. ಇದರ ನಂತ್ರ ಓಕೆಗೆ ಎರಡು ಅರ್ಥ ಬಂತು. ಒಂದು ಓಲ್ಡ್ ಕಿಂಡರ್ ಹೂಕ್. ಇನ್ನೊಂದು ಆಲ್ ಕರೆಕ್ಟ್.

ಅಮೆರಿಕಾ ಭಾರತ ಬುಡಕಟ್ಟು Choctawದ ಶಬ್ಧ okeh ದಿಂದ ಓಕೆ ಬಂದಿದೆ ಎಂಬ ಮಾತೂ ಇದೆ. ಆಫ್ರಿಕಾದ ವೊಲೊಫ್ ಭಾಷೆಯಿಂದ ಇದನ್ನು ಪಡೆಯಲಾಗಿದೆ ಎಂಬ ವಾದವೂ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...