ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವನೆ ಬಹಳ ಮುಖ್ಯ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕೊರೊನಾದಿಂದ ರಕ್ಷಣೆ ಪಡೆಯಲು ಬಯಸುವವರು ಮನೆಯಲ್ಲಿ ತಯಾರಿಸಿದ ತಾಜಾ ಆಹಾರ ಸೇವಿಸುವುದು ಬಹಳ ಮುಖ್ಯ.
ಉಪ್ಪಿಲ್ಲದ ಆಹಾರ ಸೇವನೆ ರುಚಿಸುವುದಿಲ್ಲ. ಆದ್ರೆ ಅತಿ ಹೆಚ್ಚು ಉಪ್ಪು ಸೇವನೆ ಆರೋಗ್ಯ ಹಾಳು ಮಾಡುತ್ತದೆ. ಆದ್ದರಿಂದ ಪ್ರತಿದಿನ 5 ಗ್ರಾಂ ಗಿಂತ ಹೆಚ್ಚು ಉಪ್ಪನ್ನು ಸೇವಿಸಬಾರದು. ಹೆಚ್ಚು ಸಿಹಿ ತಿನ್ನುವುದು ಸಹ ಅನೇಕ ರೋಗಗಳಿಗೆ ಕಾರಣವಾಗಬಹುದು. ಆದ್ದರಿಂದ ಸಕ್ಕರೆ ಪಾನೀಯಗಳು, ತಂಪು ಪಾನೀಯಗಳು ಸೇರಿದಂತೆ ಸಿಹಿ ಪದಾರ್ಥ ಸೇವನೆ ಕಡಿಮೆ ಮಾಡಿ.
ಪ್ರಸ್ತುತ ಹೆಚ್ಚು ನೀರು ಸೇವನೆ ಅತ್ಯಗತ್ಯ. ಹೆಚ್ಚು ದ್ರವ ಆಹಾರವನ್ನು ಸೇವಿಸಬೇಕು. ಹೆಚ್ಚು ನೀರು ಸೇವನೆ ಹಾಗೂ ದ್ರವ ಆಹಾರ ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ.
ಸೇಬುಹಣ್ಣು, ಬಾಳೆಹಣ್ಣು, ಪೇರಲೆ ಹಣ್ಣು, ಸ್ಟ್ರಾಬೆರಿ, ಮೋಸಂಬಿ, ಅನಾನಸ್, ಪಪ್ಪಾಯಿ, ಕಿತ್ತಳೆ ಹಣ್ಣುಗಳನ್ನು ಪ್ರತಿ ದಿನ ಸೇವನೆ ಮಾಡಬೇಕು. ಹಸಿರು ಕ್ಯಾಪ್ಸಿಕಂ, ಬೆಳ್ಳುಳ್ಳಿ, ಶುಂಠಿ, ನಿಂಬೆ, ಕೊತ್ತಂಬರಿ, ಕೋಸುಗಡ್ಡೆಯನ್ನು ದೈನಂದಿನ ಆಹಾರದಲ್ಲಿ ಸೇರಿಸಿ. ದ್ವಿದಳ ಧಾನ್ಯಗಳ ಸೇವನೆ ಅಗತ್ಯ.
ಓಟ್ಸ್, ಜೋಳದ ಹಿಟ್ಟು, ರಾಗಿ ಹಿಟ್ಟು, ಕಂದು ಅಕ್ಕಿಯನ್ನು ಆಹಾರದ ರೂಪದಲ್ಲಿ ಬಳಸಬೇಕು. ಬಾದಾಮಿ, ತೆಂಗಿನಕಾಯಿ ಮತ್ತು ಪಿಸ್ತಾವನ್ನು ಪ್ರತಿದಿನ ಸೇವಿಸಿ. ವಾರಕ್ಕೊಮ್ಮೆ ಮಾಂಸ ಸೇವಿಸಬೇಕು. ಕೋಳಿ, ಮೊಟ್ಟೆ ತಿನ್ನಬೇಕು.
ತಿನ್ನುವ ಮೊದಲು ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ. ಬೇಯಿಸಿದ ಆಹಾರ ಮತ್ತು ಕಚ್ಚಾ ಆಹಾರವನ್ನು ಪ್ರತ್ಯೇಕವಾಗಿ ಇರಿಸಿ. ಕಚ್ಚಾ ಆಹಾರದಲ್ಲಿರುವ ಸೂಕ್ಷ್ಮಜೀವಿಗಳು ಬೇಯಿಸಿದ ಆಹಾರವನ್ನು ತಲುಪುವುದಿಲ್ಲ. ತರಕಾರಿಗಳನ್ನು ಅತಿಯಾಗಿ ಬೇಯಿಸಬೇಡಿ. ಬೇಯಿಸಿದ್ರೆ ಜೀವಸತ್ವಗಳು ಮತ್ತು ಖನಿಜಗಳು ನಾಶವಾಗುತ್ತವೆ.