ನೋಡೋಕೆ ಸಣ್ಣದಾಗಿ ಕಾಣಬೇಕು ಅಂತಾ ಅನೇಕ ಯುವತಿಯರು ಡಯಟ್ ಹೆಸರಲ್ಲಿ ಸಾಕಷ್ಟು ಆಹಾರ ಪದಾರ್ಥಗಳನ್ನ ತ್ಯಜಿಸುತ್ತಾರೆ. ಆದರೆ ಅವೈಜ್ಞಾನಿಕ ಡಯಟ್ ಪ್ಲಾನ್ನಿಂದಾಗಿ ಬಹುತೇಕ ಮಂದಿ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗುತ್ತೆ.
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆಯಾಗೋದ್ರಿಂದ ದೇಹದ ಪ್ರತಿಯೊಂದು ಕೋಶಕ್ಕೂ ಆಮ್ಲಜನಕ ತಲುಪೋದಿಲ್ಲ. ಇದರಿಂದ ಸುಸ್ತು, ಉಗುರಿನ ಬಣ್ಣ ಬದಲಾಗೋದು, ಮುಟ್ಟಿನ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತದೆ.
ಆದರೆ ಈ ದೇಹದಲ್ಲಿನ ಹಿಮೋಗ್ಲೋಬಿನ್ ಅಂಶವನ್ನ ಸರಿದೂಗಿಸಬೇಕು ಅಂದರೆ ಮನೆಯಲ್ಲೇ ಇದಕ್ಕೆ ಉತ್ತರವಿದೆ. ನಿಮ್ಮ ಅಡುಗೆ ಮನೆಯಲ್ಲೇ ಇರುವ ಪದಾರ್ಥಗಳನ್ನ ಬಳಕೆ ಮಾಡಿ ನೀವು ಈ ಸಮಸ್ಯೆಯಿಂದ ಪಾರಾಗಬಹುದಾಗಿದೆ.
ಹಿಮೋಗ್ಲೋಬಿನ್ ಸಮಸ್ಯೆಯಿಂದ ಪಾರಾಗೋಕೆ ಕ್ಯಾರಟ್, ಬೀಟ್ರೂಟ್ನಿಂದ ಮಾಡಿದ ಜ್ಯೂಸ್ಗಳು, ದಾಳಿಂಬೆ ಜ್ಯೂಸ್ಗಳನ್ನ ಹೆಚ್ಚಾಗಿ ಸೇವನೆ ಮಾಡಿ. ಟೀ ಹಾಗೂ ಕಾಫಿ ಸೇವನೆಯನ್ನ ಆದಷ್ಟು ಕಡಿಮೆ ಮಾಡಿ.
ಅನೀಮಿಯಾದಿಂದ ಬಳಲುತ್ತಿರುವವರಿಗೆ ಡ್ರೈ ಫ್ರೂಟ್ಸ್ ಸೇವನೆ ತುಂಬಾನೇ ಒಳ್ಳೆಯದು. ಡ್ರೈ ಫ್ರೂಟ್ಸ್ ದೇಹಕ್ಕೆ ಕಬ್ಬಿಣಾಂಶವನ್ನ ನೀಡುತ್ತೆ. ಅದರಲ್ಲೂ ವಾಲ್ನಟ್, ಗೋಡಂಬಿ ದೇಹಕ್ಕೆ ಕಬ್ಬಿಣಾಂಶವನ್ನ ಒದಗಿಸುವಲ್ಲಿ ಹೆಚ್ಚು ಸಹಕಾರಿ.
ಮನೆಯಲ್ಲಿರುವ ಈ ಆಹಾರ ಪದಾರ್ಥಗಳನ್ನ ಸೇವಿಸುವ ಮೂಲಕವೇ ನೀವು ಹಿಮೋಗ್ಲೋಬಿನ್ ಕೊರತೆಯನ್ನ ಸರಿ ಮಾಡಿಕೊಳ್ಳಬಹುದು. ಆದರೆ ಅತಿಯಾದ ಹಿಮೋಗ್ಲೊಬಿನ್ ಕೊರತೆಯಿಂದ ನೀವು ಬಳಲುತ್ತಿದ್ದರೆ ಆಸ್ಪತ್ರೆಗೆ ಭೇಟಿ ನೀಡೋದು ಒಳ್ಳೆಯದು.