alex Certify ʼಪಪ್ಪಾಯʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಪಪ್ಪಾಯʼ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…?

ಪಪ್ಪಾಯಿ ಹಣ್ಣಿನಲ್ಲಿ ಬರೀ ಪೋಷಕಾಂಶಗಳು ಮಾತ್ರವಲ್ಲ, ವ್ಯಾಧಿ ನಿಯಂತ್ರಿಸುವ ಶಕ್ತಿಯು ಅಡಗಿದೆ. ಮುಖ್ಯವಾಗಿ ಇದರಲ್ಲಿರುವ ಜಿಯೋ ಕ್ಯಾಂಟೀನ್ ಎಂಬ ಆಂಟಿ ಆಕ್ಸಿಡೆಂಟ್ ವೃದ್ಧಾಪ್ಯದ ಕಾಯಿಲೆಗಳು ಕಾಡದಂತೆ, ಆಸ್ತಮ ವ್ಯಾಧಿ ತಗುಲದಂತೆ ನೋಡಿಕೊಳ್ಳುತ್ತದೆ. ಅದರ ಜೊತೆಗೆ

* ಪಪ್ಪಾಯದಲ್ಲಿನ ಬೀಟಾ ಕೆರೋಟಿನ್ ಕಾರಣದಿಂದ ಹೆಚ್ಚು ಪಪ್ಪಾಯಿ ತಿನ್ನುವವರಲ್ಲಿ ಕ್ಯಾನ್ಸರ್ ರೋಗ ಬರುವುದಿಲ್ಲ. ಪುರುಷರಲ್ಲಿನ ಪ್ರಾಸ್ಟೇಟ್ ಕ್ಯಾನ್ಸರ್ ತೊಂದರೆಯನ್ನು ಪಪ್ಪಾಯಿ ನಿಯಂತ್ರಿಸುತ್ತದೆ.

* ಎಲುಬಿನ ಆರೋಗ್ಯಕ್ಕೆ ಅಗತ್ಯದ ವಿಟಮಿನ್ ಕೆ ಕೂಡ ಇದರಲ್ಲಿ ಹೆಚ್ಚಿದೆ.

* ಸಕ್ಕರೆ ಕಾಯಿಲೆಯಲ್ಲಿ ಸಕ್ಕರೆ ಪ್ರಮಾಣ ಏರದಿರಲು ನಾರು ಸತ್ವ ಅಗತ್ಯ. ಪಪ್ಪಾಯಿಯಲ್ಲಿ ಅದು ಬೇಕಾದಷ್ಟಿದೆ.

* ಪಪ್ಪಾಯಿಯಲ್ಲಿನ ಪಾಪೆನ್ ಎಂಬ ಎಂಜೈಮ್ ಜೀರ್ಣಕ್ರಿಯೆಗೆ ಸಹಾಯಕ. ಪೊಟ್ಯಾಶಿಯಂ ಮತ್ತು ನಾರು ಸತ್ವ ಅಧಿಕವಿರುವುದರಿಂದ ಹೃದಯವನ್ನು ರಕ್ಷಿಸಲು ಇದು ಪೂರಕ.

* ಪಪ್ಪಾಯಿಯಲ್ಲಿನ ಕೋಲಿನ್ ಒಳ್ಳೆಯ ನಿದ್ರೆಗೆ ಹಾಗೂ ಮಾಂಸಖಂಡಗಳ ಪುಷ್ಟಿಗೆ ಉತ್ತಮ. ಅಲ್ಲದೆ ಕೊಬ್ಬು ಕರಗಿಸಿ ತೂಕ ತಗ್ಗಿಸುತ್ತದೆ.

* ಕೈಮೋ ಪಾಪೆನ್ ಎಂಬ ಎಂಜೈಮ್ ಇರುವ ಈ ಹಣ್ಣಿನ ತಿರುಳನ್ನು ಹುಣ್ಣುಗಳ ಮೇಲೆ ಹಚ್ಚಿದರೆ ಬೇಗ ಗುಣವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...