alex Certify ಕಿವಿ ನೋವಿನ ಜೊತೆ ಈ ಲಕ್ಷಣವಿದ್ರೆ ಇರಲಿ ಎಚ್ಚರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿ ನೋವಿನ ಜೊತೆ ಈ ಲಕ್ಷಣವಿದ್ರೆ ಇರಲಿ ಎಚ್ಚರ

ಕೊರೊನಾ ವೈರಸ್ ಲಕ್ಷಣಗಳು ವೈದ್ಯರಿಗೆ ಸವಾಲಾಗಿದೆ. ಕೊರೊನಾ ವೈರಸ್ ಲಕ್ಷಣಗಳಲ್ಲಿ ದಿನಕ್ಕೊಂದು ಬದಲಾವಣೆ ಕಾಣ್ತಿದೆ. ಸಾಮಾನ್ಯ ಜ್ವರ ಬಂದ್ರೂ ಜನರು ಭಯಪಡುವಂತಾಗಿದೆ. ಹಾಗೆ ಕಿವಿನೋವು ಕಾಣಿಸಿಕೊಂಡ್ರೆ ಜನರಿಗೆ ಕೊರೊನಾ ಭಯ ಶುರುವಾಗುತ್ತದೆ.

ಈ ಬಗ್ಗೆ ವೈದ್ಯರು ಸ್ಪಷ್ಟನೆ ನೀಡಿದ್ದಾರೆ. ಬರೀ ಕಿವಿ ನೋವು ಕಾಣಿಸಿಕೊಂಡರೆ ಅದು ಕೊರೊನಾ ಲಕ್ಷಣವಲ್ಲ. ಜ್ವರ, ಕೆಮ್ಮು, ಉಸಿರಾಟದ ಸಮಸ್ಯೆ ಜೊತೆ ಕಿವಿ ನೋವು ಕಾಣಿಸಿಕೊಂಡರೆ ಅದು ಕೊರೊನಾ ಲಕ್ಷಣವೆಂದು ವೈದ್ಯರು ಹೇಳಿದ್ದಾರೆ.

ಕಿವಿ ನೋವಿಗೆ ದವಡೆಯ ಸಂಧಿವಾತ, ಕಿವಿ ಸೋಂಕು, ಗಾಯ ಅಥವಾ ಕಿವಿಯಲ್ಲಿ ಸಿಕ್ಕಿಬಿದ್ದ ಹುಳ, ಕಸ, ಹಲ್ಲುನೋವು, ಕಿವಿಗೆ ನೀರು ಹೋದಾಗ ಹೀಗೆ ಅನೇಕ ಕಾರಣಗಳಿರುತ್ತವೆ. ಕೆಲವೊಮ್ಮೆ ಶೀತಕ್ಕೂ ಕಿವಿನೋವು ಕಾಣಿಸುತ್ತದೆ.

ಸಾಮಾನ್ಯ ಕಿವಿ ನೋವು ಕಾಣಿಸಿದ್ರೆ ಭಯಬೇಡ. ಕೊರೊನಾ ಲಕ್ಷಣಗಳ ಜೊತೆ ಕಿವಿನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿ ಮಾಡುವಂತೆ ಸಲಹೆ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...