alex Certify ಹೇಗಿರಬೇಕು ಕೊರೊನಾ ಸೋಂಕಿತರ ಆಹಾರ…? ಇಲ್ಲಿದೆ ಒಂದಷ್ಟು ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿರಬೇಕು ಕೊರೊನಾ ಸೋಂಕಿತರ ಆಹಾರ…? ಇಲ್ಲಿದೆ ಒಂದಷ್ಟು ಮಾಹಿತಿ

ಕೋವಿಡ್ ಸೋಂಕಿತರಾದರೆ ಆಹಾರ ಪದ್ಧತಿ ಹೇಗಿರಬೇಕೆಂಬ ಬಗ್ಗೆ ಚರ್ಚೆ ಈಗ ಹೆಚ್ಚು ನಡೆಯುತ್ತಿದೆ. ಡಯಟೀಶಿಯನ್‌ಗಳು ಸಲಹೆಗಳನ್ನು ನೀಡಿ ಯಾವ ಆಹಾರ ಬಳಸುವುದು ಸೂಕ್ತ? ಯಾವುದು ಸೂಕ್ತವಲ್ಲ ಎಂದು ಮಾಹಿತಿಗಳನ್ನು ನೀಡುತ್ತಿದ್ದಾರೆ.

ಕೋವಿಡ್ ರೋಗಿಗಳು ಮತ್ತು ಚೇತರಿಕೆಯ ಹಾದಿಯಲ್ಲಿರುವ ಇಬ್ಬರಿಗೂ ಪೌಷ್ಠಿಕಾಂಶವು ಮಹತ್ವದ ಪಾತ್ರ ವಹಿಸುತ್ತದೆ. ಯಾಕೆಂದರೆ ಈ ಸಮಯದಲ್ಲಿ ದೇಹವು ದುರ್ಬಲಗೊಳ್ಳುತ್ತದೆ ಮತ್ತು ರೋಗಲಕ್ಷಣಗಳಿಂದ ಚೇತರಿಸಿಕೊಂಡ ನಂತರವೂ ಇದು ಕೆಲವು ದಿನಗಳವರೆಗೆ ಮುಂದುವರಿಯುತ್ತದೆ.

ಹೀಗಾಗಿ ಶೀಘ್ರವಾಗಿ ದೇಹದ ಸಂಪೂರ್ಣ ಚೇತರಿಕೆಗೆ ಸರಿಯಾದ ರೀತಿಯ ಆಹಾರವನ್ನು ಸೇವಿಸುವುದು ಅತ್ಯಗತ್ಯವಾಗಿರುತ್ತದೆ. ಪೌಷ್ಟಿಕ ತಜ್ಞರು ಈ ಬಗ್ಗೆ ಪಟ್ಟಿಯೊಂದನ್ನು ನೀಡಿದ್ದಾರೆ.

ಮಹಿಳೆಯರು ತಮ್ಮ ʼಆ ದಿನʼಗಳಲ್ಲಿ ಲಸಿಕೆ ಪಡೆಯುವಂತಿಲ್ಲವೇ…? ಇಲ್ಲಿದೆ ವದಂತಿ ಹಿಂದಿನ ಅಸಲಿ ಸತ್ಯ

ಶಿಫಾರಸು ಮಾಡಲಾದ ಆಹಾರ:

ಬೆಳಗಿನ ಉಪಾಹಾರ- ಅವಲಕ್ಕಿ/ ದೋಸೆ / ತರಕಾರಿ ಉಪ್ಪಿಟ್ಟು / ಶಾವಿಗೆ ಉಪ್ಪಿಟ್ಟು /ಇಡ್ಲಿ + 2 ಮೊಟ್ಟೆಯ ಬಿಳಿಭಾಗ ಜತೆಗೆ ಅರಿಶಿಣ ಮತ್ತು ಶುಂಠಿ ಪುಡಿಯೊಂದಿಗೆ ಗೋಲ್ಡನ್ ಹಾಲು.

ಮಧ್ಯಾಹ್ನ ಊಟ- ರಾಗಿ ಅಥವಾ ಬಹು ಧಾನ್ಯ ಹಿಟ್ಟಿನ ಚಪಾತಿ / ಅನ್ನ / ವೆಜ್ ಪುಲಾವ್ / ಕಿಚಡಿ/ ದಾಲ್, ಗ್ರೀನ್ ಸಲಾಡ್, ಮೊಸರು ಸಲಾಡ್ (ಕ್ಯಾರೆಟ್ ಮತ್ತು ಸೌತೆಕಾಯಿ)

ಸಂಜೆ ಸ್ನ್ಯಾಕ್ಸ್- ಶುಂಠಿ ಚಹಾ / ಸಸ್ಯಾಹಾರಿ ಅಥವಾ ಚಿಕನ್ ಅಥವಾ ರೋಗನಿರೋಧಕ ಸೂಪ್ / ಮೊಳಕೆ ಚಾಟ್

ರಾತ್ರಿ ಊಟ- ರಾಗಿ / ಬಹುಧಾನ್ಯ ಹಿಟ್ಟಿನ ಚಪಾತಿ / ಸೋಯಾ ಬೀನ್ಸ್ / ಪನೀರ್ / ಚಿಕನ್ ಅಥವಾ ಹಸಿರು ಗ್ರೀನ್ ಸಲಾಡ್ (ಕ್ಯಾರೆಟ್ ಮತ್ತು ಸೌತೆಕಾಯಿ)

ರೋಗಿಗೆ ಅತಿಸಾರ ಅಥವಾ ವಾಕರಿಕೆ ಬರುತ್ತಿದ್ದರೆ ವೆಜ್ ಕಿಚಡಿ ಕೊಡಬಹುದು. ಶುಂಠಿ ಚಹಾ (ಶುಂಠಿ, ತುಳಸಿ / ಲೆಮನ್‌ಗ್ರಾಸ್, ದಾಲ್ಚಿನ್ನಿ, ಲವಂಗ ಅಥವಾ ಏಲಕ್ಕಿ)ಕೂಡ ಸೂಕ್ತ.

ಹಣ್ಣುಗಳ ಸೇವೆಯಿಂದ ಸಾಕಷ್ಟು ಅನುಕೂಲವಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.‌‌‌ ಹೆಚ್ಚಿನ ರೋಗಿಗಳು ವಾಸನೆ ಮತ್ತು ರುಚಿ ಅಥವಾ ನುಂಗಲು ತೊಂದರೆ ಅನುಭವಿಸುತ್ತಾರೆ. ಹೀಗಾಗಿ ಒಮ್ಮೆಲೆ ಎಲ್ಲವನ್ನೂ ಸ್ವೀಕರಿಸುವ ಬದಲು ಮೃದುವಾದ ಆಹಾರವನ್ನು ಆಗಿಂದಾಗ್ಗೆ ಸೇವಿಸುವುದು ಸೂಕ್ತವಾಗಲಿದೆ. ಅಂದರೆ ಕೆಲವು ಅಂತರಗಳನ್ನು ಕೊಟ್ಟು ಸೇವಿಸುವುದು‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...