1. ಒಂಟಿತನ ಹೆಚ್ಚಾದಂತೆಯೇ ಆತಂಕ ಹಾಗೂ ಖಿನ್ನತೆ ಕಾಡಲು ಆರಂಭವಾಗುತ್ತೆ. ಈ ಸಂದರ್ಭದಲ್ಲಿ ಆದಷ್ಟು ಸ್ನೇಹಿತರ ಜೊತೆ ಸಂಪರ್ಕದಲ್ಲಿರಿ. ನಿಮ್ಮ ಆತಂಕ, ಚಿಂತೆಯನ್ನ ಪ್ರೀತಿ ಪಾತ್ರರೊಂದಿಗೆ ಹಂಚಿಕೊಳ್ಳಿ.
2. ಪ್ರಾಣಾಯಾಮ, ಧ್ಯಾನ, ದೀರ್ಘ ಉಸಿರಾಟ ಇವೆಲ್ಲವೂ ಆತಂಕ ಹಾಗೂ ಒತ್ತಡವನ್ನ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿವೆ.
3. ವ್ಯಾಯಾಮ ಕೂಡ ಆತಂಕ ಹಾಗೂ ಖಿನ್ನತೆ ನಿವಾರಣೆಗೆ ಉತ್ತಮ ಪರಿಹಾರವಾಗಿದೆ. ದಿನಕ್ಕೆ ಕನಿಷ್ಟ 30 ನಿಮಿಷ ಏರೋಬಿಕ್ಸ್ ಮಾಡಿ. ಸಂಗೀತವನ್ನ ಹಾಕಿಕೊಂಡು ವ್ಯಾಯಾಮ ಮಾಡೋದ್ರಿಂದ ನಿಮಗೆ ಇನ್ನಷ್ಟು ನಿರಾಳ ಎನಿಸಲಿದೆ.
4. ಚಿಂತೆ ಮಾಡೋದ್ರಿಂದ ಮಾನಸಿಕ ಆರೋಗ್ಯ ಕೆಡುತ್ತೆ. ಹೀಗಾಗಿ ಚಿಂತೆ ಮಾಡೋದನ್ನು ನಿಲ್ಲಿಸಿ. ಇದರಿಂದ ನಿಮ್ಮ ಆತಂಕ ಕೂಡ ದೂರಾಗಲಿದೆ.
5. ನೀವು ಯಾವ ರೀತಿ ಯೋಚನೆಗಳನ್ನ ಮಾಡುತ್ತಿರೋ ನಿಮ್ಮ ಮಾನಸಿಕ ಆರೋಗ್ಯ ಕೂಡ ಅದೇ ರೀತಿ ಇರುತ್ತೆ. ಸದಾ ಆತಂಕದಲ್ಲೇ ಇರೋದ್ರಿಂದ ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಅಪನಂಬಿಕೆ ಹುಟ್ಟಬಹುದು. ಹೀಗಾಗಿ ವಿಷಯವನ್ನ ವಿವಿಧ ಆಯಾಮಗಳಲ್ಲಿ ಯೋಚಿಸೋದನ್ನ ಕಲಿತುಕೊಳ್ಳಿ.