ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಕೆಲವರಿಗೆ ಮಾರುಕಟ್ಟೆಯಿಂದ ತಂದ ಸೊಳ್ಳೆ ಕಾಯಿಲ್ ಉಪಯೋಗಿಸುವುದರಿಂದ ಅಲರ್ಜಿ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದರ ಬದಲು ಮನೆಯ ಮುಂದೆ ಈ ರೀತಿಯ ಗಿಡಗಳನ್ನು ನೆಟ್ಟು ನೋಡಿ. ಜಾಗವಿಲ್ಲದಿದ್ದರೆ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸಿ. ಇದರಿಂದ ಸೊಳ್ಳೆಕಾಟ ಕಡಿಮೆಯಾಗುತ್ತದೆ.
* ಪುದೀನಾ ಅಡುಗೆಗೆ ಮಾತ್ರವಲ್ಲದೇ ಇದನ್ನು ಔಷಧಿಯಾಗಿ ಬಳಸುತ್ತಾರೆ. ಇದರ ಕಷಾಯ ಸೇವಿಸುವುದರಿಂದ ತಲೆನೋವು, ಶೀತ ಕೂಡ ಕಡಿಮೆಯಾಗುತ್ತದೆ. ಹಾಗೇ ಇದನ್ನು ಒಂದು ಪಾಟ್ ನಲ್ಲಿ ಹಾಕಿ ಬೆಳೆಸುವುದರಿಂದ ಸೊಳ್ಳೆ ಕಾಟ ಕಡಿಮೆಯಾಗುತ್ತದೆ. ಸೂರ್ಯನ ಬೆಳಕು ಜಾಸ್ತಿ ಬೀಳುವ ಕಡೆ ಇದನ್ನು ಇಡಿ.
*ರೋಸ್ಮೆರಿ ಗಿಡ ಕೂಡ ಸೊಳ್ಳೆ ಕಾಟ ನಿವಾರಿಸುವುದರಲ್ಲಿ ಸಹಾಯ ಮಾಡುತ್ತದೆ. ಸ್ವಲ್ಪ ರೋಸ್ಮೆರಿ ಗಿಡವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಸುಟ್ಟು ಬಿಡಿ. ಇದರ ಹೊಗೆಯನ್ನು ಎಲ್ಲಾ ಕಡೆ ಹಿಡಿಯಿರಿ. ಇದರಿಂದ ಸೊಳ್ಳೆ ಕಾಟ ಕಡಿಮೆಯಾಗುತ್ತದೆ.
*ಇನ್ನು ಚಂಡು ಹೂವು ನೋಡುವುದಕ್ಕೆ ಎಷ್ಟು ಚೆಂದವೂ ಇದರ ಪ್ರಯೋಜನ ಕೂಡ ಅಷ್ಟೇ ಇದೆ. ಇದನ್ನು ನಿಮ್ಮ ಗಾರ್ಡನ್ ಅಥವಾ ಬಾಲ್ಕನಿಯಲ್ಲಿ ಬೆಳೆಸಿದರೆ ಇದರ ಪರಿಮಳಕ್ಕೆ ಸೊಳ್ಳೆ ದೂರ ಓಡುತ್ತದೆ.