alex Certify ಸೊಳ್ಳೆ ಕಾಟ ನಿವಾರಿಸಿಕೊಳ್ಳಬೇಕೆ…? ಹಾಗಾದ್ರೆ ಈ ಗಿಡಗಳನ್ನು ನೆಟ್ಟು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೊಳ್ಳೆ ಕಾಟ ನಿವಾರಿಸಿಕೊಳ್ಳಬೇಕೆ…? ಹಾಗಾದ್ರೆ ಈ ಗಿಡಗಳನ್ನು ನೆಟ್ಟು ನೋಡಿ

ಮಳೆಗಾಲದಲ್ಲಿ ಸೊಳ್ಳೆಗಳ ಕಾಟ ಹೆಚ್ಚು. ಕೆಲವರಿಗೆ ಮಾರುಕಟ್ಟೆಯಿಂದ ತಂದ ಸೊಳ್ಳೆ ಕಾಯಿಲ್ ಉಪಯೋಗಿಸುವುದರಿಂದ ಅಲರ್ಜಿ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಇದರ ಬದಲು ಮನೆಯ ಮುಂದೆ ಈ ರೀತಿಯ ಗಿಡಗಳನ್ನು ನೆಟ್ಟು ನೋಡಿ. ಜಾಗವಿಲ್ಲದಿದ್ದರೆ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸಿ. ಇದರಿಂದ ಸೊಳ್ಳೆಕಾಟ ಕಡಿಮೆಯಾಗುತ್ತದೆ.

* ಪುದೀನಾ ಅಡುಗೆಗೆ ಮಾತ್ರವಲ್ಲದೇ ಇದನ್ನು ಔಷಧಿಯಾಗಿ ಬಳಸುತ್ತಾರೆ. ಇದರ ಕಷಾಯ ಸೇವಿಸುವುದರಿಂದ ತಲೆನೋವು, ಶೀತ ಕೂಡ ಕಡಿಮೆಯಾಗುತ್ತದೆ. ಹಾಗೇ ಇದನ್ನು ಒಂದು ಪಾಟ್ ನಲ್ಲಿ ಹಾಕಿ ಬೆಳೆಸುವುದರಿಂದ ಸೊಳ್ಳೆ ಕಾಟ ಕಡಿಮೆಯಾಗುತ್ತದೆ. ಸೂರ್ಯನ ಬೆಳಕು ಜಾಸ್ತಿ ಬೀಳುವ ಕಡೆ ಇದನ್ನು ಇಡಿ.

*ರೋಸ್ಮೆರಿ ಗಿಡ ಕೂಡ ಸೊಳ್ಳೆ ಕಾಟ ನಿವಾರಿಸುವುದರಲ್ಲಿ ಸಹಾಯ ಮಾಡುತ್ತದೆ. ಸ್ವಲ್ಪ ರೋಸ್ಮೆರಿ ಗಿಡವನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಸುಟ್ಟು ಬಿಡಿ. ಇದರ ಹೊಗೆಯನ್ನು ಎಲ್ಲಾ ಕಡೆ ಹಿಡಿಯಿರಿ. ಇದರಿಂದ ಸೊಳ್ಳೆ ಕಾಟ ಕಡಿಮೆಯಾಗುತ್ತದೆ.

*ಇನ್ನು ಚಂಡು ಹೂವು ನೋಡುವುದಕ್ಕೆ ಎಷ್ಟು ಚೆಂದವೂ ಇದರ ಪ್ರಯೋಜನ ಕೂಡ ಅಷ್ಟೇ ಇದೆ. ಇದನ್ನು ನಿಮ್ಮ ಗಾರ್ಡನ್ ಅಥವಾ ಬಾಲ್ಕನಿಯಲ್ಲಿ ಬೆಳೆಸಿದರೆ ಇದರ ಪರಿಮಳಕ್ಕೆ ಸೊಳ್ಳೆ ದೂರ ಓಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...