alex Certify ಲಾಕ್ ಡೌನ್ ಪ್ಯಾನಿಕ್: ಸುಖ ನಿದ್ರೆಗೆ ಮಾಡಿ ಈ ‘ವ್ಯಾಯಾಮ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಪ್ಯಾನಿಕ್: ಸುಖ ನಿದ್ರೆಗೆ ಮಾಡಿ ಈ ‘ವ್ಯಾಯಾಮ’

ಕೊರೊನಾ ವೈರಸ್ ಲಾಕ್ ಡೌನ್ ನಿಂದ ಜನರು ಒತ್ತಡ, ಬೇಸರ ಮತ್ತು ಹತಾಶೆಗೆ ಒಳಗಾಗಿದ್ದಾರೆ. ಇದ್ರಿಂದ ಸರಿಯಾದ ನಿದ್ರೆ ಬರ್ತಿಲ್ಲ. ಆರೋಗ್ಯವಾಗಿರಲು ಉತ್ತಮ ನಿದ್ರೆ ಬಹಳ ಮುಖ್ಯ.

ಉತ್ತಮ ನಿದ್ರೆ ಬಯಸುವವರು ಚೈಲ್ಡ್ ಪೋಸ್ ವ್ಯಾಯಾಮ ಮಾಡಬೇಕು. ರಾತ್ರಿ ಮಲಗುವ ಮೊದಲು ಈ ವ್ಯಾಯಾಮ ಮಾಡಬಹುದು. ಇದು ಉತ್ತಮ ನಿದ್ರೆಗೆ ಸಹಕಾರಿ.

ಹಾಸಿಗೆಗೆ ಹೋಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದ ತಕ್ಷಣ ಧ್ಯಾನ ಮಾಡುವುದು ಬಹಳ ಒಳ್ಳೆಯದು. ಶಾಂತವಾಗಿ ಕುಳಿತು 10 ನಿಮಿಷ ಧ್ಯಾನ ಮಾಡಿದ್ರೆ ಉತ್ತಮ ನಿದ್ರೆ ಬರುತ್ತದೆ. ಐದು ನಿಮಿಷ ಒಳ್ಳೆಯ ಧ್ಯಾನ ಕೂಡ ನಿಮಗೆ ಉತ್ತಮ ನಿದ್ರೆ ನೀಡಬಲ್ಲದು.

ಒತ್ತಡದಿಂದಾಗಿ ಮನಸ್ಸಿಗೆ ಕಿರಿಕಿರಿಯುಂಟಾಗುತ್ತದೆ. ಉಸಿರಾಡುವ ಸಮಸ್ಯೆ ಕೆಲವರನ್ನು ಕಾಡುತ್ತದೆ. ಅಂತವರು ಪ್ರಾಣಾಯಾಮ ಮಾಡುವುದು ಬಹಳ ಒಳ್ಳೆಯದು. ಯೋಗ, ವ್ಯಾಯಾಮಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಸದಾ ಮನೆಯಲ್ಲಿದ್ದು ಒತ್ತಡಕ್ಕೊಳಗಾಗುವವರಿಗೆ ಯೋಗ, ಪ್ರಾಣಾಯಾಮ ಒಳ್ಳೆಯ ಔಷಧಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...