alex Certify ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮುಟ್ಟಿನ ಸಮಸ್ಯೆಗೆ ಇಲ್ಲಿದೆ ಪರಿಹಾರ

ಅನಿಯಮಿತ ಮುಟ್ಟಿನ ಸಮಸ್ಯೆ ನಿಮ್ಮನ್ನು ಬಿಡದೆ ಕಾಡುತ್ತಿದೆಯೇ. ಅದರೊಂದಿಗೆ ಹೊಟ್ಟೆ, ತಲೆ, ಬೆನ್ನು ನೋವಿನ ಸಮಸ್ಯೆಯೂ ಜೀವ ಹಿಂಡುತ್ತಿದೆಯೇ. ಇಲ್ಲಿದೆ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.

ಹೆಚ್ಚಿನ ವ್ಯಾಯಾಮ, ಆಲ್ಕೋಹಾಲ್ ಸೇವನೆ, ಒತ್ತಡ, ಹೆಚ್ಚಿನ ಆಂಟಿ ಬಯಾಟಿಕ್ ಸೇವನೆಯಿಂದ ಕೆಲವೊಮ್ಮೆ ಮುಟ್ಟಿನ ದಿನ ಅನಿಯಮಿತವಾಗಿ ಮುಂದುವರಿಯಬಹುದು. ಕಾಯಿ ಪಪ್ಪಾಯಿ ಸೇವನೆಯಿಂದ ಈ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಇದರ ರಸವನ್ನು ಎರಡು ದಿನಕ್ಕೊಮ್ಮೆ ಮುಟ್ಟು ಬರುವ ತನಕ ಸೇವಿಸುವುದರಿಂದ ತಿಂಗಳ ರಜೆ ಸರಿಯಾದ ದಿನದಲ್ಲಿ ಸಹಜವಾಗಿ ನಡೆಯುತ್ತದೆ.

ನಿಮ್ಮ ಆಹಾರದಲ್ಲಿ ನಿಯಮಿತವಾಗಿ ಅರಶಿನವನ್ನು ಸೇವಿಸುವುದರಿಂದ ಹಾರ್ಮೋನ್ ಗಳು ಸಮತೋಲನಗೊಂಡು ಮುಟ್ಟಿನ ಸಮಸ್ಯೆ ನಿಯಂತ್ರಣಕ್ಕೆ ಬರುತ್ತದೆ. ನೋವಿನ ಲಕ್ಷಣಗಳನ್ನೂ ಇದು ಕಡಿಮೆ ಮಾಡುತ್ತದೆ.

ಅಲೊವೇರಾ ಕೂಡಾ ಇದೇ ಪರಿಣಾಮ ಬೀರುತ್ತದೆ. ಇದನ್ನು ಜೇನುತುಪ್ಪದೊಂದಿಗೆ ನಿತ್ಯ ಬೆಳಗಿನ ಉಪಾಹಾರಕ್ಕೂ ಮುನ್ನ ಸೇವಿಸಿ. ದೇಹ ಮತ್ತು ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಂತ ಯೋಗ ಮತ್ತು ಧ್ಯಾನ ಮಾಡಿ. ಇದು ಒತ್ತಡ ನಿವಾರಿಸಿ ಮುಟ್ಟಿನ ಸಮಸ್ಯೆ ದೂರ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...