alex Certify ಮಸಾಲೆಯುಕ್ತ ಪದಾರ್ಥ ಸೇವನೆಯಿಂದ ಹೊಟ್ಟೆ ಭಾರವಾಗಿದ್ದರೆ ಇದನ್ನು ಸೇವಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಸಾಲೆಯುಕ್ತ ಪದಾರ್ಥ ಸೇವನೆಯಿಂದ ಹೊಟ್ಟೆ ಭಾರವಾಗಿದ್ದರೆ ಇದನ್ನು ಸೇವಿಸಿ

ಹೆಚ್ಚಾಗಿ ಎಲ್ಲರೂ ಎಣ್ಣೆ ಹಾಗೂ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದರಿಂದ ಕೆಲವರ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಹೊಟ್ಟೆ ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ.

*ಸೆಲರಿ ಮತ್ತು ಕಲ್ಲುಪ್ಪು : ಸೆಲರಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗಾಗಿ ½ ಚಮಚ ಸೆಲರಿಯನ್ನು ಕಲ್ಲುಪ್ಪಿನೊಂದಿಗೆ ಮಿಕ್ಸ್ ಮಾಡಿ ನೀರಿನೊಂದಿಗೆ ಸೇವಿಸಿ. ಇದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ.

ಕಪ್ಪು ಎಳ್ಳು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…..?

*ಏಲಕ್ಕಿ : ಏಲಕ್ಕಿ ಜೀರ್ಣಕ್ರಿಯೆಗೆ ಉತ್ತಮ. ಹಾಗಾಗಿ ಏಲಕ್ಕಿಯನ್ನು ತಿಂದು ನೀರು ಕುಡಿಯಿರಿ. ಇದರಿಂದ ಅಜೀರ್ಣದಿಂದ ಹೊಟ್ಟೆ ಊದಿಕೊಂಡಿರುವುದು ಸರಿಯಾಗುತ್ತದೆ.

*ಜೀರಿಗೆ, ದನಿಯಾ ಮತ್ತು ಸೊಂಪು : ಜೀರಿಗೆ, ದನಿಯಾ ಮತ್ತು ಸೋಂಪನ್ನು ನೀರಿನಲ್ಲಿ ಹಾಕಿ ಕುದಿಸಿ ದಿನಕ್ಕೆ 3 ಬಾರಿ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...