ಹೆಚ್ಚಾಗಿ ಎಲ್ಲರೂ ಎಣ್ಣೆ ಹಾಗೂ ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇದರಿಂದ ಕೆಲವರ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗಿ ಹೊಟ್ಟೆ ಊದಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದುಗಳನ್ನು ಬಳಸಿ.
*ಸೆಲರಿ ಮತ್ತು ಕಲ್ಲುಪ್ಪು : ಸೆಲರಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಹಾಗಾಗಿ ½ ಚಮಚ ಸೆಲರಿಯನ್ನು ಕಲ್ಲುಪ್ಪಿನೊಂದಿಗೆ ಮಿಕ್ಸ್ ಮಾಡಿ ನೀರಿನೊಂದಿಗೆ ಸೇವಿಸಿ. ಇದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ.
ಕಪ್ಪು ಎಳ್ಳು ಸೇವನೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಗೊತ್ತಾ…..?
*ಏಲಕ್ಕಿ : ಏಲಕ್ಕಿ ಜೀರ್ಣಕ್ರಿಯೆಗೆ ಉತ್ತಮ. ಹಾಗಾಗಿ ಏಲಕ್ಕಿಯನ್ನು ತಿಂದು ನೀರು ಕುಡಿಯಿರಿ. ಇದರಿಂದ ಅಜೀರ್ಣದಿಂದ ಹೊಟ್ಟೆ ಊದಿಕೊಂಡಿರುವುದು ಸರಿಯಾಗುತ್ತದೆ.
*ಜೀರಿಗೆ, ದನಿಯಾ ಮತ್ತು ಸೊಂಪು : ಜೀರಿಗೆ, ದನಿಯಾ ಮತ್ತು ಸೋಂಪನ್ನು ನೀರಿನಲ್ಲಿ ಹಾಕಿ ಕುದಿಸಿ ದಿನಕ್ಕೆ 3 ಬಾರಿ ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.