ಬೇಸಿಗೆಯಲ್ಲಿ ಮೈಯ ಉಷ್ಣತೆ ವಿಪರೀತ ಏರುವುದು ಸಹಜ. ಅದನ್ನು ನಿಯಂತ್ರಿಸುವುದು ಹೇಗೆಂದು ಅಲೋಚಿಸುತ್ತಿದ್ದೀರಾ. ಇಲ್ಲಿದೆ ಕೆಲವು ಸಲಹೆಗಳು.
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಹೊರತಾಗಿ ಸಿಟ್ರಸ್ ಹಣ್ಣುಗಳನ್ನು ಸೇವಿಸಿ. ಇದರಲ್ಲಿ ನೀರಿನಂಶ ಹೆಚ್ಚಿರುತ್ತದೆ. ಹಾಗೂ ನಿಮ್ಮ ದೇಹ ಡಿಹೈಡ್ರೇಶನ್ ಆಗದಂತೆ ನೋಡಿಕೊಳ್ಳುತ್ತದೆ.
ಆಹಾ ಎಂಥಾ ರುಚಿ ಮಾವಿನ ಹಣ್ಣಿನ ಸೀಕರಣೆ
ದಿನದ ಒಂದು ಹೊತ್ತಿನ ಊಟದೊಂದಿಗೆ ಮೊಸರು ಸೇವಿಸಿ. ಬೇಸಿಗೆಯ ಶಾಖವನ್ನು ದೇಹದಿಂದ ಹೊರಹಾಕುವ ಶಕ್ತಿ ಮೊಸರಿಗಿದೆ. ಹಾಗಾಗಿ ಮೊಸರು ಸೇವಿಸುವುದನ್ನು ಮರೆಯದಿರಿ.
ಉಪ್ಪಿನ ಬಳಕೆ ಕಡಿಮೆ ಮಾಡಿ. ಏಲಕ್ಕಿ ಪುಡಿ ಬೆರೆಸಿದ ಚಹಾ ಕುಡಿಯಿರಿ. ತರಕಾರಿಯ ಸಲಾಡ್ ಗಳನ್ನು ಸೇವಿಸಿ. ನಿಂಬೆ ಜ್ಯೂಸ್, ಮುಳ್ಳುಸೌತೆಗೆ ನಿಮ್ಮ ಊಟದ ಮೆನುವಿನಲ್ಲಿ ಜಾಗವಿಡಿ.